ಹುಬ್ಬಳ್ಳಿ: ಕ್ಯಾನ್ಸರ್ ಮಾರಕ ಕಾಯಿಲೆ ಆಗಿದ್ದರೂ ಗುಣಪಡಿಸಲು ಸಾದ್ಯವಿದೆ. ಹೀಗಾಗಿ ಕ್ಯಾನ್ಸರ್ ಪೀಡಿತರು ಎದೆಗುಂದಬಾರದು. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ಅನ್ನು ನಿವಾರಿಸಬಹುದಾಗಿದೆ ಎಂಬ ಸಂದೇಶ ತಿಳಿಸಲು ಹುಬ್ಬಳ್ಳಿಯಲ್ಲಿ ಸ್ಕೇಟಿಂಗ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
ಹುಬ್ಬಳ್ಳಿ ರೌಂಡ್ ಟೇಬಲ್-37, ಹುಬ್ಬಳ್ಳಿ ಲೇಡೀಸ್ ಸರ್ಕಲ್- 45 ಹಾಗೂ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯು ಪಬ್ಲಿಕ್ ನೆಕ್ಸ್ಟ್‌ನ ಸಹಭಾಗಿತ್ವದಲ್ಲಿ ಈ ಕ್ಯಾನ್ಸರ್ ಜಾಗೃತಿ ಸ್ಕೇಟಿಂಗ್ ರ್‍ಯಾಲಿಯನ್ನು ಆಯೋಜಿಸಲಾಗಿತ್ತು.
ಈ ರ್‍ಯಾಲಿಗೆ ತತ್ವದರ್ಶ ಆಸ್ಪತ್ರೆ, ರ್‍ಯಾಡ್‌ಆನ್ ಕ್ಯಾನ್ಸರ್ ಸೆಂಟರ್ ಕೂಡ ಸಹಭಾಗಿದಾರರಾಗಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ರ್‍ಯಾಡ್‌ಆನ್ ಕ್ಯಾನ್ಸರ್ ಸೆಂಟರ್‌ವರೆಗೆ ಸ್ಕೇಟಿಂಗ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ತರಬೇತುದಾರ ಅಕ್ಷಯ್ ಸೂರ್ಯವಂಶಿ, ಜಗತ್ತಿನಿಂದ ಕ್ಯಾನ್ಸರ್ ಮಹಾಮಾರಿಯನ್ನು ಹೊಡೆದೋಡಿಸಲು ಎಲ್ಲರೂ ಜಾಗೃತರಾಗಬೇಕಿದೆ. ನನ್ನ ತಂದೆ ಕೂಡ ಕ್ಯಾನ್ಸರ್‌ನಿಂದ ಬಳಲಿದ್ದನ್ನು ಎದುರಿಸಿದ್ದೇನೆ. ಅಂತಹ ಸ್ಥಿತಿ ಮತ್ಯಾರಿಗೂ ಬರಬಾರದು. ಕ್ಯಾನ್ಸರ್‌ನಿಂದ ಆಗುವ ಸಾವಿನ ಪ್ರಮಾಣ ಕಡಿಮೆಯಾಗಬೇಕು ಎಂದರು.
ಸ್ಕೇಟಿಂಗ್ ರ್‍ಯಾಲಿಯಲ್ಲಿ ಪಾಲ್ಗೊಂಡ ಸ್ಕೇಟಿಂಗ್ ಪಟುವೊಬ್ಬ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ.
ಹುಬ್ಬಳ್ಳಿ ಲೇಡೀಸ್ ಸರ್ಕಲ್ 45 ಅಧ್ಯಕ್ಷೆ ಪೂನಮ್ ಹುತಗಿಕರ್, ಹುಬ್ಬಳ್ಳಿ ರೌಂಡ್ ಟೇಬಲ್- 37 ಪದಾಧಿಕಾರಿಗಳು ಸಚಿನ್ ಶಾ, ಡಾ. ವಿವೇಕ್ ಪಾಟೀಲ್, ಆದರ್ಶ ಮೆಹರವಾಡೆ, ಸಚಿನ್ ಆಕಳವಾಡಿ, ಹುಮಾಂಶು ಕೊಟಾರಿ, ಪ್ರಮೋದ್ ಹುತಗಿಕರ್, ಅನಂತ್ ಮುಳಗುಂದ್, ಡಾ. ಸಂಜಯ್ ಮಾಶಾಳ್, ಡಾ. ಸಂಜೀವ್ ಕುಳಗೋಡ, ಡಾ. ರಾಘವೇಂದ್ರ, ಡಾ ಶೀತಲ್ ಕುಳಗೋಡ, ಡಾ. ಅಪೂರ್ವಾ, ಮಾನಸಿ ಕೊಠಾರಿ, ಪುನೀತಾ ಮಾಶಾಳ್, ವೇದಿಕಾ ಮುಳಗುಂದ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/02/2022 05:29 pm