ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಮಯಕ್ಕೆ ಬಾರದ 108 ಆಂಬ್ಯುಲೆನ್ಸ್ ನಿಂದ ವ್ಯಕ್ತಿ ಸಾವು..!

ಕಲಘಟಗಿ: ಪಟ್ಟಣದ ಮೃತ್ಯುಂಜಯ ಕೆರೆಯಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೊರ್ವ ಕಾಲು ಜಾರಿ ಬಿದ್ದು ಒದ್ದಾಡುತ್ತಿರುವಾಗ, ಸ್ಥಳೀಯರ ಸಹಾಯದಿಂದ ನೀರಿನಿಂದ ಹೊರ ತೆಗೆದು 108 ಆಂಬ್ಯುಲೆನ್ಸ್ ಕರೆ ಮಾಡಿದರು ಸಮಯಕ್ಕೆ ಸರಿಯಾಗಿ ಬಾರದೇ ಅಲ್ಲದೇ ಸ್ಥಳೀಯ ತಾಲೂಕಾ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕಕ್ಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾವನ್ನಪ್ಪಿರುವರು ಪಟ್ಟಣದ ಕೆರಿ ಓಣಿಯ ನಿವೃತ್ತ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಶಂಕರಯ್ಯ ಗುರುಶಾಂತಯ್ಯ ಹಿರೇಮಠ (೬೨) ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ವೇಳೆ ಪಟ್ಟಣದ ಮೃತ್ಯುಂಜಯ ಕೆರೆಯಲ್ಲಿ ಕೈ ಕಾಲು ತೋಳೆದುಕೊಳ್ಳುಲು ಹೋದಾಗ ಅಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಈಜುಬಾರದೇ ಮುಳಗುತ್ತಿರವುದನ್ನು ಕಂಡು,ಸ್ಥಳದಲ್ಲಿದ್ದ ಜನರು ನೀರಿಗೆ ಇಳಿದು ಆತನನ್ನು ರಕ್ಷಿಸಿದ್ದಾರೆ.ನಂತರ 108 ಅಂಬುಲ್ಯೆನ್ಸಗೆ ಕರೆ ಮಾಡಿದಾಗ, ಅಂಬುಲೇನ್ಸ್ ಬಾರದಿದ್ದಾಗ ಸ್ಥಳದಲ್ಲಿದ್ದ ಸಿಲಿಂಡರ ಸಪ್ಲಾಯ ಮಾಡುವ ವಾಹನದಲ್ಲಿ ವ್ಯಕ್ತಿಯನ್ನು ಹಾಕಿಕೊಂಡು ಸ್ಥಳೀಯ ತಾಲೂಕ ಸಾರ್ವಜನಿಕ ಸರಕಾರಿ ಆಸ್ಪತ್ರಗೆ ಕರೆತಂದಾಗ ಸರಿಯಾಗಿ ಚಿಕಿತ್ಸೆ ನೀಡದೇ ವೈದ್ಯಾಧಿಕಾರಿಗಳಿಂದ ಸಾವನ್ನಪ್ಪಿದ್ದಾರೆಂದು ಮೃತನ ಮಕ್ಕಳು ಆರೋಪ ಮಾಡಿದ್ದಾರೆ.

ಇದು ಅಲ್ಲದೇ ಸಕಾಲಕ್ಕೆ ಅಂಬುಲೇನ್ಸ್ ಬರದ ಕಾರಣ ವ್ಯಕ್ತಿ ಮೃತಪಟ್ಟಿರುವುದಾಗಿ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಸಾರ್ವಜನಿಕರು ಸೇರಿ ಪ್ರತಿಭಟನೆ ಮಾಡಿ,ಜಿಲ್ಲಾ ವೈದಾಧಿಕಾರಿ ಬರುವಂತೆ ಪಟ್ಟು ಹಿಡಿದರು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳವವರೆಗೆ ಮೃತ ದೇಹವನ್ನು ಶವಪರೀಕ್ಷೆ ಮಾಡಿಸುವುದಿಲ್ಲವೆಂದು ಪ್ರತಿಭಟನೆ ಮಾಡಿದರು.ಸ್ಥಳಕ್ಕೆ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ಎಸ್.ಬಿ.ನಿಂಬಣ್ಣವರ ಸ್ಥಳಕ್ಕೆ ಆಗಮಿಸಿ,ಘಟನೆಯ ಕುರಿತು ತನಿಖೆ ಮಾಡಿಸುವುದಾಗಿ ಪ್ರತಿಭಟನಾ ನಿರತರಿಗೆ ಸಮಾಧಾನ ಪಡಿಸಲು ಪ್ರಯತ್ನಿಸಿದರು.ಇದಕ್ಕೂಪ್ಪದ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಜಿಲ್ಲಾ ವ್ಯದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ತಪ್ಪತಸ್ಥರ ಮೇಲೆ ಕ್ರಮಕೈಗೊಳ್ಳ ವಂತೆ ಇಲ್ಲದೇ ಇದ್ದರೆ,ರಾತ್ರಿಯೂ ಧರಣಿ ನಡೆಸುವುದಾಗಿ ತಿಳಿಸಿದರು.

ಸ್ಥಳಕ್ಕೆ ಕಲಘಟಗಿ ಪೊಲೀಸ್ ಸಿಪಿಐ ಪ್ರಭು ಸೂರಿನ್ ಆಗಮಿಸಿ ಘಟನೆಯ ವಿಚಾರಣೆ ನಡೆಸುತ್ತಿದ್ದಾರೆ.ಆದ್ರೆ ಸ್ಥಳೀಯರು ಮಾತ್ರ ವೈದ್ಯಾಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/01/2022 10:20 pm

Cinque Terre

63.44 K

Cinque Terre

2

ಸಂಬಂಧಿತ ಸುದ್ದಿ