ಹುಬ್ಬಳ್ಳಿ: ದಿ.ವೀರಭದ್ರಪ್ಪ ವಿ. ಅಸುಂಡಿ ಇವರ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು
ಇದೇ ಡಿಸೆಂಬರ್ 19 ರಂದು ನಗರದ ಬಿಡನಾಳದ ಆರ್.ಕೆ ಪಾಟೀಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಧಾರವಾಡ, ಎಮ್.ಎಮ್ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿಶ್ವ ಮದ್ವ ಮಹಾಪರಿಷತ್ ಹುಬ್ಬಳ್ಳಿ, ಶ್ರೀ ಗುರು ಮಹಿಪತಿರಾಜ ನೇತ್ರ ಬ್ಯಾಂಕ್ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಮೋಹನ ಅಸುಂಡಿ ಗೆಳೆಯರ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನ ಆಯೋಜಿಸಲಾಗಿದೆ. ಎಲ್ಲರು ಬಂದು ಈ ಉಚಿತ ಶಿಬಿರದ ಸದುಪಯೋಗ ಪಡೆದೊಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
Kshetra Samachara
16/12/2021 04:01 pm