ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರೋಗ್ಯ ಸಚಿವರಲ್ಲಿ ಅಳಲನ್ನು ತೋಡಿಕೊಂಡ 104 ಸಹಾಯವಾಣಿ ಸಿಬ್ಬಂದಿ

ಹುಬ್ಬಳ್ಳಿ- ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿ ಪ್ರತಿಭಟಿನೆ ಮಾಡುತ್ತಿದ್ದಾರೆ. ಸಧ್ಯ ಇವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾರಕ ಕೂಡಲೇ ಸಮಸ್ಯೆ ಪರಿಸುವ ಭರವಸೆ ನೀಡಿದ್ದಾರೆ.

ಹೌದು, ಆರೋಗ್ಯ ಸಹಾಯವಾಣಿ ಸಿಬ್ಬಂದಿಯು ಹಲವು ಬೇಡಿಕೆಗಳನ್ನು ಈಡೇರಿಸುವಂತೆ, ಕಳೆದ 16 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಸ್ಪಂದಿಸಿರಲಿಲ್ಲ. ಇಂದು ಆರೋಗ್ಯ ಸಚಿವರು ಹುಬ್ಬಳ್ಳಿಗೆ ಬಂದಿರುವ ಹಿನ್ನೆಲೆಯಲ್ಲಿ, 104 ಆರೋಗ್ಯ ಸಹಾಯವಾಣಿಯ ಸಿಬ್ಬಂದಿ ಸಚಿವರನ್ನು ಭೇಟಿ ಮಾಡಿ ಇತ್ತ ತಮ್ಮ ಅಳಲು ತೊಡಿಕೊಂಡರು.

ಸಿಬ್ಬಂದಿಗಳ ಮನವಿಯನ್ನು ಸ್ವೀಕಾರ ಮಾಡಿದ ಸಚಿವರು, ಈ ವಿಷಯ ಟೆಂಡರ್ ಹಂತದಲ್ಲಿದ್ದು ಕೂಡಲೇ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು, ಇನ್ನು ಯಾರು ಸಿಬ್ಬಂದಿಗೆ ಸಮಸ್ಯೆ ಮಾಡುವರೋ ಅಂತರರನ್ನು ಟೆಂಡರ್ ಹಂತದಿಂದ ಕೈಬಿಡಲಾಗುವುದು. ಟೆಂಡರ್ ಕರೆಯುವ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಲಾಗುವುದು, ಸರ್ಕಾರವೇ ನಿಯಂತ್ರಿಸುವ ಅಧಿಕಾರ ಇಟ್ಟುಕೊಳ್ಳಲಿದೆ ಎಂದರು.

ಒಟ್ಟಿನಲ್ಲಿ ಸದ್ಯ ಹುಬ್ಬಳ್ಳಿಯ IT ಪಾರ್ಕ್ ನಲ್ಲಿರುವ ಆರೋಗ್ಯ ಸಹಾಯವಾಣಿ ಕೇಂದ್ರದ 200 ಸಿಬ್ಬಂದಿ ದುಡಿದ ಕೆಲಸಕ್ಕೆ ಸಂಬಳ ಸಿಗದೇ ಪರದಾಡುತ್ತಿದ್ದು, ಇವರಿಗೆ ಸಚಿವರು ನ್ಯಾಯ ಒದಗಿಸುತ್ತಾರಾ ಎಂದು ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

22/10/2021 06:58 pm

Cinque Terre

40.71 K

Cinque Terre

2

ಸಂಬಂಧಿತ ಸುದ್ದಿ