ಗದಗ:ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ.
ವೈಶಾಲಿ ಶಿವಪ್ಪ ಲಮಾಣಿ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಜೆಗೆ ಎಂದು ಊರಿಗೆ ಬಂದಿದ್ದಳು. ವಿದ್ಯಾರ್ಥಿನಿಗೆ ಮೊದಲಿಗೆ ಜ್ವರ ಕಾಣಿಸಿಕೊಂಡಿತು. ಬಳಿಕ ಡೆಂಗ್ಯೂ ಜ್ವರ ಎಂದು ಗೊತ್ತಾದ ಮೇಲೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಶಿವಪ್ಪ ಮತ್ತು ತುಳಜಾಬಾಯಿ ದಂಪತಿಗೆ ಒಬ್ಬಳೆ ಮಗಳಾಗಿದ್ದು, ಗದಗ ಜಿಲ್ಲೆಯ ಮುಳಗುಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಸರಾ ರಜೆ ಊರಿಗೆ ಬಂದಿದ್ದ ವೈಶಾಲಿ ಸಾವನ್ನಪ್ಪಿದ್ದು, ವಿದ್ಯಾರ್ಥಿನಿ ಸಾವಿಗೆ ಮನೆಯಲ್ಲಿ ಅಲ್ಲದೇ ಇಡೀ ಹರದಗಟ್ಟಿ ಗ್ರಾಮವೇ ಕಂಬನಿ ಮಿಡಿಯುತ್ತಿದ್ದಾರೆ. ಮಗಳ ಸಾವು ಕಂಡ ಮನೆಯಲ್ಲಿ ಆಕ್ರಂದನ ಮುಗುಲು ಮುಟ್ಟಿದೆ.
Kshetra Samachara
16/10/2021 04:03 pm