ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ವೃಂದಕ್ಕೆ ಆರೋಗ್ಯ ತಪಾಸಣೆ...!

ಹುಬ್ಬಳ್ಳಿ: ರೋಟರಿ ಹೈ ಸ್ಕೂಲ್ ಹುಬ್ಬಳ್ಳಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ರೋಟರಿ ಕ್ಲಬ್ ಆಪ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ವಿನೂತನ ರೀತಿಯಲ್ಲಿ ಆಚರಿಸಿದರು.

ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಯೋಜಿ ಹಿಮೋಗ್ಲೋಬಿನ್, ಶೂಗರ್, ಥೈರಾಯಿಡ್, ಬಿ.ಪಿ. ಹಾಗೂ ಮೂಳೆ ಖನಿಜ ಸಾಂದ್ರತೆ (ಬಿ.ಎಂ.ಡಿ.) ತಪಾಸಣೆ ಮಾಡಲಾಯಿತು.

100 ಕ್ಕೂ ಅಧಿಕ ಶಿಕ್ಷಕರು ಈ ಶಿಬಿರದ ಸದುಪಯೋಗ ಪಡೆದರು. ಇದೇ ಸಂದರ್ಭದಲ್ಲಿ ಹೈ ಸ್ಕೂಲ್ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ಹಾಗೂ ಹದಿಹರೆಯದವರ ಆರೋಗ್ಯದ ಬಗ್ಗೆ ಡಾ. ನಾಗರೇಖಾ ಹೆಬಸೂರ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕ್ಲಬಿನ ಅಧ್ಯಕ್ಷೆ ಸಂಜನಾ ಮಹೇಶ್ವರಿ, ಕಾರ್ಯದರ್ಶಿ ಅಂಜನಾ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

08/09/2021 04:03 pm

Cinque Terre

20.92 K

Cinque Terre

0

ಸಂಬಂಧಿತ ಸುದ್ದಿ