ಹುಬ್ಬಳ್ಳಿ- ಕೋವಿಡ್ ನಂತರ ಬ್ಲ್ಯಾಕ್ ಫಂಗಸ್ ಸಾಮನ್ಯವಾಗಿದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಮೇದುಳಿಗೆ ತಗುಲಿದರೆ ಬಹುತೇಕ ರೋಗಿ ಬದುಕುವುದು ಕಠಿಣ, ಅಂತಹ ಒಂದು ರೋಗಿಗೆ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯನ್ನು ಬದುಕಿಸಲಾಗಿದೆ. ಇದು ಉತ್ತರ ಕರ್ನಾಟಕದಲ್ಲಿ ಮೊದಲ ರೋಗಿಯಾಗಿದ್ದಾರೆ ಎಂದು ಕೆಎಲ್ಇ ಸುಚಿರಾಯು ಆಸ್ಪತ್ರೆಯ ಡಾ. ರಾಜು ಕದಂ ಹೇಳಿದರು.
ಬಳ್ಳಾರಿಯ ಜಿಲ್ಲೆಯ ಹರಪ್ಪನಹಳ್ಳಿ ನಿವಾಸಿ ಯೋಗರಾಜ ವೈಷ್ಣವ (42) ಇವರು ಕಂಪ್ಪು ಶಿಲೀಂಧ್ರ ಬಾಯಿಯಿಂದ ಮೂಗಿಗೆ, ಕಣ್ಣಿಗೆ ದೇಹದ ಎಲ್ಲ ಭಾಗಕ್ಕೆ ಹರಡಿ ಮೇದುಳಿಗೆ ತಗುಲಿ ಬದುಕುವ ಸಾಧ್ಯತೆ ಇಲ್ಲದ ಸಮಯದಲ್ಲಿ ಶುಚಿರಾಯು ಆಸ್ಪತ್ರೆ ವೈದ್ಯರ ತಂಡ ಚಿಕಿತ್ಸೆ ನೀಡಿ ಬದುಕಿಸಿದೆ. ಸುಮಾರು 62 ದಿನ ನಿರಂತರ ಚಿಕಿತ್ಸೆ ನೀಡಲಾಗಿದ್ದು, ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಇಂತಹ ರೋಗಿಯನ್ನು ಮೊದಲ ಬಾರಿಗೆ ಚಿಕಿತ್ಸೆ ನೀಡಿದ್ದು, ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ರೋಗಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಲಾಗಿದೆ ಎಂದರು.
Kshetra Samachara
14/08/2021 07:50 pm