ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತನ್ನು ಉಳಿಸಿಕೊಂಡ ಚಿಟಗುಪ್ಪಿ ಆಸ್ಪತ್ರೆ

ಈರಣ್ಣ ವಾಲಿಕಾರ,ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ- ಕೊರೊನಾ ಜೀವ ಕಳೆಯುವ ಸುದ್ದಿಗಳನ್ನೇ ಹೆಚ್ಚು ನೀಡುತ್ತಿದೆ. ಆದರೆ ಇದರ ನಡುವೆ ಜಿಲ್ಲೆಯಲ್ಲಿ, ಸಾಕಷ್ಟು ಮಕ್ಕಳೂ ಪ್ರಪಂಚಕ್ಕೆ ಕಾಲಿಟ್ಟಿದ್ದು, ಸದ್ದಿಲ್ಲದೆ ಈ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.

ಹೌದು,,, ಸಾಮಾನ್ಯವಾಗಿ ಕೊರೊನಾ ಸಂದರ್ಭದಲ್ಲಿ ಸೋಂಕಿತರ ಹೊರತಾದ ಇತರ ರೋಗಿಗಳನ್ನು ಪರೀಕ್ಷೆ ಮಾಡುವುದು ಕಷ್ಟದ ಕೆಲಸವಾಗಿದೆ. ಆದರೆ ಅವಧಿ ಪೂರ್ಣಗೊಳಿಸಿದ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲೇಬೇಕಾದ ಅನಿವಾರ್ಯತೆ ಇದ್ದು, ಕೊರೊನಾ ನಡುವೆ ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ, ಮಹಾನಗರ ಪಾಲಿಕೆಯ ಚಿಟುಗುಪ್ಪಿ ಆಸ್ಪತ್ರೆಯ ವೈದ್ಯರು, ಮತ್ತೊಮ್ಮೆ ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತನ್ನು ಸಾಬೀತುಪಡಿಸಿದ್ದಾರೆ.

ರಾಜ್ಯದಲ್ಲಿ ಮೂರನೇ ಅಲೆ ಬರುತ್ತಿದೆ. ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಈ ವೇಳೆ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನೂರಾರು ಹೆರಿಗೆಗಳಾಗುತ್ತಿವೆ. ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೀಯ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/08/2021 07:55 pm

Cinque Terre

57.32 K

Cinque Terre

5

ಸಂಬಂಧಿತ ಸುದ್ದಿ