ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆರತಿ ಬೆಳಗಿ ಕೋವಿಡ್ ಲಸಿಕೆಯನ್ನು ಸ್ವಾಗತಿಸಿದ ಆಸ್ಪತ್ರೆಯ ಸಿಬ್ಬಂದಿ

ನವಲಗುಂದ: ಇಲ್ಲಿನ ತಾಲೂಕು ಆಸ್ಪತ್ರೆಗೆ ಇಂದು ಕೋವಿಡ್-೧೯ ಲಸಿಕೆ ತಲುಪಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಆರತಿ ಬೆಳಗುವ ಮೂಲಕ ಬರಮಾಡಿಕೊಂಡರು.

ಒಟ್ಟು 8 ವ್ಯಾಕ್ಸಿನ್ ಬಾಕ್ಸ್‌ಗಳು ತಾಲೂಕು ಆಸ್ಪತ್ರೆಗೆ ತಲುಪಿದ್ದು, ಶನಿವಾರದಂದು ಸುಮಾರು 72 ಜನರಿಗೆ ಲಸಿಕೆಯನ್ನು ನೀಡಲಾಗುವುದು. ಇದರಿಂದಾಗಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ರೂಪಾ ಕಿಣಗಿ ತಿಳಿಸಿದ್ದಾರೆ.

ಈ ವೇಳೆ ವೈದ್ಯಾಧಿಕಾರಿ ವಾಯ್.ಪಿ.ಅಣ್ಣಿಗೇರಿ, ಎಂ.ಎಸ್.ಮಂಗಳಾ, ಎನ್.ಎಸ್. ಪಾಟೀಲ್, ಸಹದೇವ ಪೂಜಾರ, ಕೆ.ಆರ್. ಗಾಳರಡ್ಡಿ, ಆಶಾ ಕಾರ್ಯಕರ್ತೆಯರಾದ ದ್ಯಾಮವ್ವ ಹೆಬ್ಬಳ್ಳಿ, ಮಹಾದೇವಿ ಪಾಟೀಲ, ವಿಜಯಲಕ್ಷ್ಮಿ ಕಲಾಲ, ಶೈಲಾಜ ಯಾಧವ, ಸವಿತಾ ಸತ್ಯಮ್ಮನಗುಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

15/01/2021 10:34 pm

Cinque Terre

14.51 K

Cinque Terre

2

ಸಂಬಂಧಿತ ಸುದ್ದಿ