ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ವಿಶ್ವ ಹೃದಯದ ದಿನ ನಮ್ಮ ನಿಮ್ಮ ಹೃದಯದ ಕಾಳಜಿ ನೆನಪಿನ ಸುದಿನ

ಆಧುನಿಕ ಜೀವನ ಶೈಲಿ ಬದುಕಿನ ಜಂಜಾಟ ಅದರಲ್ಲೂ ಮುಖ್ಯವಾಗಿ ಈ ಕೋವಿಡ್ ಬಂದ್ ಮೇಲಂತೂ ನಾವು ಮುಖ್ಯವಾದವರ ಮೇಲಿನ ಕಾಳಜಿಯನ್ನೇ ಮರೆತು ಸಣ್ಣ ಸಣ್ಣ ವಿಷಯಕ್ಕೂ ಖಿನ್ನತೆಗೆ ಒಳಗಾಗಿ ನಮ್ಮೊಳಗಿನ ನಮ್ಮ ಹೃದಯದ ಕಾಳಜಿಯಿಂದ ದೂರವಾಗಿದ್ದೇವೆ.

ಈ ಹೃದಯದ ವಿಷಯ ಈಗೇಕೆ ಅಂದ್ರಾ ? ಇಂದು ವಿಶ್ವ ಹೃದಯದ ದಿನ ಅಲ್ವಾ ಅದಕ್ಕೆ ನಾವು ನಮ್ಮ ಆರೋಗ್ಯಯುತ ಜೀವನ ಶೈಲಿಗೆ ಬಾಹ್ಯ ರಕ್ಷಣೆಯಂತೆ ದೇಹದ ಒಳಗಿನ ರಕ್ಷಣೆಯೂ ಪ್ರಮುಖ ಹೀಗಾಗಿ ನಮ್ಮ ಶರೀರಕ್ಕೆ ಶುದ್ಧ ರಕ್ತ ಪೂರೈಸಿ ಶಾರೀರವನ್ನು ಸಮತೋಲವನ್ನಾಗಿ ಇಡುವ ಹೃದಯ ಕಾಳಜಿಗೆ ನಾವು ನೀವು ಮುಂದಾಗ ಬೇಕಾಗಿರುವುದು ಈ ದಿನದ ವಿಶೇಷ ಹಾಗಿದ್ರೆ ಆ ಹೃದಯದ ಕಾಳಜಿಗೆ ಇಲ್ಲಿದೆ ಕೆಲವು ಟಿಪ್ಸ್.

* ದಿನಕ್ಕೆ ಸಾಧ್ಯವಾದಷ್ಟು ಬೆಳಗ್ಗಿನ ಅವಧಿಯಲ್ಲಿ ವ್ಯಾಯಾಮ, ಯೋಗಾಭ್ಯಾಸ ಮಾಡಿ.

* ಮುಖ್ಯವಾಗಿ ಧೂಮಪಾನ, ಮದ್ಯಪಾನದಂತಹ ವ್ಯಸನದಿಂದ ಮುಕ್ತವಾಗಿರಿ.

* ಚಿಂತನೆ, ಒತ್ತಡ, ಮಾನಸಿಕ ಹಿಂಸೆ ಖಿನ್ನತೆಗೆ ಒಳಗಾಗಬೇಡಿ.

* ಒಂದೇ ವಿಷಯವನ್ನು ದೀರ್ಘ ಸಮಯ ಚಿಂತಿಸದಿರಿ.

* ಮಲಗುವ ಮೊದಲು ದಿನದಲ್ಲಿ ನಡೆದ ಚಟುವಟಿಕೆ ಗಮನಿಸಿ ಯಾವುದೇ ಖಿನ್ನತೆಗೆ ಲಕ್ಷ್ಯ ವಹಿಸಬೇಡಿ.

* ಗಾಳಿ, ಹವಾನಿಯಂತ್ರಿತ ಪ್ರದೇಶದಲ್ಲಿ ವಾಸಿಸಿ ಇದರಿಂದ ಹೃದಯ ಆಮ್ಲಜನಕ ಸರಾಗವಾಗುತ್ತದೆ.

* ಆರೋಗ್ಯಕರ ಜೀವನಕ್ಕಾಗಿ ಡಯಟ್ ಮಾಡಿರಿ ಆದ್ರೆ ಕೆಲಸದ ಒತ್ತಡದಲ್ಲಿ ಹಸಿವು ಮರೆಯಬೇಡಿ.

* ಮುಖ್ಯವಾಗಿ ದಿನಕ್ಕೆ ಸರಿಯಾಗಿ 8 ಗಂಟೇಯ ವರೆಗೆ ನಿದ್ರಿಸಿ.

* ಜೀವನದಲ್ಲಿ ನಗೆ, ಹಾಸ್ಯ, ತುಂಟಾಟಗಳು ಸಹ ಹೃದಯಕ್ಕೆ ಲಾಭದಾಯಕ.

* ವಯಸ್ಸಿಗನುಗಣವಾಗಿ ನಿಮ್ಮ ದೇಹದ ತೂಕವಿರಲಿ ನಿಮ್ಮ ಅತೀ ತೂಕ ನಿಮ್ಮ ಹೃದಯಕ್ಕೆ ಭಾರ.

* ಒತ್ತಡಗಳು ಎದುರಾದಾಗ ಯಾರಿಂದಲಾದರೂ ಸಲಹೆ ಪಡೆಯಿರಿ ಬಗೆಹರಿಹಿಕೊಳ್ಳಿ.

* ಏಕಾಂಗಿ, ಒಂಟಿತನ, ಜಿಗಪ್ಸೆಯಂತಹ ಸನ್ನಿವೇಶಗಳಿಗೆ ಒಳಗಾಗದಿರಿ.

* ವಿಪರೀತ ನಿದ್ದೆ ತ್ಯಜಿಸುವುದು, ಕರೀದ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

* ಸಾಧ್ಯವಾದರೇ ಮಧುರವಾದ ಸಂಗೀತ ಕೇಳಿ ಆನಂದಿಸಿ ನೀವು ಧ್ವನಿಗೊಡಿಸಿ.

* ಸ್ನೇಹಿತರ ಜೊತೆ ನಿಮಗೆ ಅಂತರಾಳದ ಆಪತ್ತು, ಕಷ್ಟ ನೋವು ನಲಿವನ್ನ ಹಂಚಿಕೊಳ್ಳಿ.

Edited By : Nirmala Aralikatti
Kshetra Samachara

Kshetra Samachara

29/09/2020 04:57 pm

Cinque Terre

14.21 K

Cinque Terre

1

ಸಂಬಂಧಿತ ಸುದ್ದಿ