ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಾತ್ರಾ ಮಹೋತ್ಸವಗಳಿಗೆ ಪರವಾನಿಗಿ ನೀಡಿ

ಧಾರವಾಡ: ಸದ್ಯ ಕೊರೊನಾ ಮೂರನೇ ಅಲೆ ಹತೋಟಿಗೆ ಬರುತ್ತಿದ್ದು, ಮಠ, ಮಂದಿರಗಳಲ್ಲಿ ಸರ್ಕಾರ ಜಾತ್ರಾ ಮಹೋತ್ಸವಗಳಿಗೆ ಪರವಾನಿಗಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಜಾತ್ರಾ ಮಹೋತ್ಸವಗಳಿಗೆ ಪರವಾನಿಗಿ ನೀಡಿಲ್ಲ. ಈಗ ಮೂರನೇ ಅಲೆ ಹತೋಟಿಗೆ ಬಂದಿದ್ದು, ಸರ್ಕಾರ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದುಕೊಂಡಿದೆ. ಹೀಗಾಗಿ ಜಾತ್ರಾ ಮಹೋತ್ಸವಗಳಿಗೂ ಪರವಾನಿಗಿ ನೀಡಬೇಕು.

ರೈತರು, ಕಲಾವಿದರು, ಹೂವು, ಹಣ್ಣು ವ್ಯಾಪಾರಸ್ಥರಿಗೆ ಆದಾಯದ ಮೂಲವೇ ಜಾತ್ರೆ, ಉತ್ಸವಗಳಾಗಿದ್ದು, ಅವರ ಬದುಕಿಗೂ ಸರ್ಕಾರ ಭದ್ರತೆ ಒದಗಿಸಬೇಕು. ಸೌಹಾರ್ಧತೆ, ಏಕತೆ, ಧಾರ್ಮಿಕತೆ ಹೆಗ್ಗುರುತಾದ ಈ ಜಾತ್ರಾ ಮಹೋತ್ಸವಗಳಿಗೆ ಸರ್ಕಾರ ಕೂಡಲೇ ಪರವಾನಿಗಿ ನೀಡಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

04/02/2022 02:01 pm

Cinque Terre

20.57 K

Cinque Terre

0

ಸಂಬಂಧಿತ ಸುದ್ದಿ