ಧಾರವಾಡ : ಶಹರದ ಶೆಟ್ಟರ್ ಕಾಲನಿಯಲ್ಲಿ ಕಳೆದ ರಾತ್ರಿ 11: 30 ರ ವೇಳೆಗೆ ಗಾಯಗೊಂಡಿದ್ದ ಹದ್ದು ಕಾಣಿಸಿಕೊಂಡಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಪ್ರಾಣಿ ಪ್ರೇಮಿ ಸೌರಭ್ ಕಮ್ಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡಿದ್ದ ಹದ್ದನ್ನು ಪಶು ಚಿಕಿತ್ಸಲಾಯಕ್ಕೆ ತೆಗೆದುಕೊಂಡು ಚಿಕಿತ್ಸೆ ಕೊಡಿಸಿದ್ದಾರೆ.
ಗಾಯಗೊಂಡಿದ್ದ ಹದ್ದಿನ ರೆಕ್ಕೆ ಮುರಿದಿದ್ದರಿಂದ ರೆಕ್ಕೆಗೆ ರಾಡ್ ಹಾಕುವ ಮೂಲಕ ಯಶಸ್ವಿಯಾಗಿ ಪಶು ವೈದ್ಯಧಿಕಾರಿ ಅನಿಲ್ ಪಾಟೀಲ ಹದ್ದಿಗೆ ಚಿಕಿತ್ಸೆ ನೀಡಿದ್ದಾರೆ.
Kshetra Samachara
08/10/2021 10:00 pm