ಕುಂದಗೋಳ : ಪಟ್ಟಣದ ಅಂಗಡಿಕಾರರೇ, ಬೀದಿ ಬದಿ ವ್ಯಾಪಾರಸ್ಥರೇ, ಸಾರ್ವಜನಿಕರೇ, ಕೇಳ್ರಿ ಕೇಳ್ರಿ ಮಾಸ್ಕ್ ಮರೆತು ಓಡಾಟ ಮಾಡಬೇಡಿ ಎಚ್ಚರ ಎಚ್ಚರ.
ಏನ್ರೀ ! ಈ ಜಾಗೃತಿ ಯಾಕೆ ಅಂದ್ರಾ, ಇದು ನಾವು ಹೇಳ್ತಾ ಇರೋ ಮಾತಲ್ಲಾ, ಬದಲಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇಂದು ಎಲ್ಲೇಡೆ ಟ್ರ್ಯಾಕ್ಟರ್ ತಗೋಂಡು ಜನರಿಗೆ ಜಾಗೃತಿ ಮೂಡಿಸಿದ ಮಾತು.
ಇಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಲ್ಲ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ, ಬೀದಿ ವ್ಯಾಪಾರಿಗಳಿಗೆ, ಜನ ಸಾಮಾನ್ಯರಿಗೆ, ವಾಹನ ಸವಾರರಿಗೆ ಮಾಸ್ಕ್ ಬಳಸುವಂತೆ ಸಲಹೆ ನೀಡಿ, ಕೊರೊನಾ ಹತೋಟಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಒಂದು ವೇಳೆ ನಾಳೆ ಮಾಸ್ಕ್ ಹಾಕದ ಅಂಗಡಿ ಮುಂಗಟ್ಟುಗಳು ವ್ಯಾಪಾರಸ್ಥರು, ಗ್ರಾಹಕರು, ಬೀದಿ ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ದಂಡ ಹಾಕುವ ಎಚ್ಚರಿಕೆ ನೀಡಿ. ಕೆಲ ವಾಹನ ಸವಾರರಿಗೆ ಇಂದು ದಂಡ ಸಹ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಅದೇನೆ ಇರಲಿ ಸಾರ್ವಜನಿಕರೇ ನೀವೂ ಕೇಳ್ರಿ . ಮಾಸ್ಕ್ ಮರೆತು ಓಡಾಡ ಬೇಡಿ, ದಂಡ ಕಟ್ಟ ಬೇಡಿ. ರೋಗ ಹರಡಿಸಬೇಡಿ. ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
21/01/2022 04:47 pm