ಕುಂದಗೋಳ : ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೌಲಭ್ಯ ಆರಂಭವಾಗಿದ್ದರೂ ಸಹ ಕೋವಿಡ್ ಭಯದಲ್ಲಿ ಜನರು ಈ ಸೌಲಭ್ಯದಿಂದ ದೂರ ಉಳಿದು ಕೊಳ್ಳುತ್ತಿದ್ದಾರೆ.
ಕೊರೊನಾ ವೈರಸ್ ಮುಂಜಾಗ್ರತಾ ಅವಧಿಯ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಕುಂದಗೋಳ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ಮಾನ್ ಕೌಂಟರ್ ಬಾಗಿಲು ತೆರೆದ್ರೂ ಜನರಿಲ್ಲದೆ ಬೀಕೊ ಎನ್ನುತ್ತಿದೆ.
ಸರ್ಕಾರ ಬಡ ಜನರ ಅನುಕೂಲಕ್ಕಾಗಿ ಚಿಕಿತ್ಸೆ ವೆಚ್ಚ ಕಡಿಮೆ ಮಾಡಲು ವಾರ್ಷಿಕ ಪ್ರತಿ ಕುಟುಂಬಕ್ಕೆ ಅರ್ಹತಾ ರೋಗಿಗೆ 5 ಲಕ್ಷ ಹಾಗೂ ಸಾಮಾನ್ಯ ರೋಗಿಗೆ 1.50 ಲಕ್ಷ ಕಡಿಮೆ ಮಾಡಲು ಅನುಕೂಲವಾಗಲೆಂದು ಸೌಲಭ್ಯ ಕಲ್ಪಿಸಿದ್ರೆ ಸದ್ಯ ಜನರಿಂದಲೇ ಈ ಆಯುಷ್ಮಾನ್ ಸೇವೆ ಕೌಂಟರ್ ಬಿಕೋ ಎನ್ನುತ್ತಿರವುದು ವಿಪರ್ಯಾಸವೇ ಸರಿ.
ಇನ್ನಾದರೂ ಈಗಾಗಲೇ ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ಈ ಸೌಲಭ್ಯ ಬಳೆಸಿಕೊಳ್ಳಿ ಎಂಬುದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
18/09/2020 07:21 pm