ಕಲಘಟಗಿ: ಪಟ್ಟಣದಲ್ಲಿ ತಹಶೀಲ್ದಾರ ಅಶೋಕ ಶಿಗ್ಗಾವಿ ಅವರು ಸಿಪಿಐ ವಿಜಯ ಬಿರಾದಾರ ಜತೆಗೆ ರಸ್ತೆಗಿಳಿದು ಮಾಸ್ಕ್ ಹಾಕದವರನ್ನು ಹಿಡಿಯುವ ಕಾರ್ಯಾಚರಣೆಯನ್ನು ಮಾಡಿದ್ದು ವಿಶೇಷವಾಗಿತ್ತು.
ಪಟ್ಟಣದಲ್ಲಿ ಮಾಸ್ಕ್ ಹಾಕದೆ ಬರುವ ದ್ವಿ ಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರನ್ನು ತಡೆದು ಕರೋನಾ ಟೆಸ್ಟ್ ಮಾಡಿಸಿದರು. ಹನುಮಾನ ದೇವಸ್ಥಾನದಲ್ಲಿ ಕರೋನಾ ಟೆಸ್ಟ್ ಕೌಂಟರ್ ತೆರೆಯಲಾಗಿತ್ತು.
ಡಾ ಬಸವರಾಜ ಬಾಸೂರ,ಮುಖ್ಯಾಧಿಕಾರಿ ಚಂದ್ರಶೇಖರ ಬಿ ಹಾಗೂ ಆರೋಗ್ಯ ಇಲಾಖೆ, ಪೊಲೀಸ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.
Kshetra Samachara
04/10/2020 05:59 pm