ಅಣ್ಣಿಗೇರಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆ ಪ್ರಮಾಣದಲ್ಲಿ ಸಾಗುತ್ತಿರುವ ಕೊರೋನಾ ಮಹಾಮಾರಿ ಸೋಮವಾರ ತಾಲೂಕಿನ ಗ್ರಾಮಗಳಾದ ನಾವಳ್ಳಿ ಹಾಗೂ ಶಲವಡಿ ಗ್ರಾಮಗಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ದೃಡ ಪಟ್ಟಿದೆ.
ಶಲವಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರಿಗೆ ಹಾಗೂ ಓರ್ವ ಆಯಾಗೆ ಸೇರಿದಂತೆ ಒಟ್ಟು 7 ಜನರಿಗೆ ಸೋಂಕು ದೃಡ ಪಟ್ಟಿದೆ. ಇನ್ನು ನಾವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 19 ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಅಮಾಸೆ ಅವರ ನೇತೃತ್ವದಲ್ಲಿ ಶಾಲೆಗಳನ್ನು ಜನವರಿ 30ರ ವರೆಗೆ ಸೀಲ್ ಡೌನ್ ಮಾಡಲಾಗುತ್ತದೆ ಎಂದು ತಿಳಿದಿರುತ್ತದೆ.
Kshetra Samachara
24/01/2022 09:33 pm