ನವಲಗುಂದ : ಪಟ್ಟಣದ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಜನ ಔಷಧಿ ದಿನಾಚರಣೆ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಹಿ ಹಂಚಿ ಆಸ್ಪತ್ರೆಯ ಸಿಬ್ಬಂದಿಗಳಿಂದ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ತಾಲೂಕ ಮುಖ್ಯ ವೈದ್ಯಾದಿಕಾರಿಗಳಾದ ಡಾ.ರೂಪಾ ಕಿಣಗಿ ಮಾತನಾಡಿ, ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಸ್ಥಳೀಯ ಜನ ಔಷಧಿ ಕೇಂದ್ರದಲ್ಲಿ ದೊರೆಯುತ್ತಿವೆ ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಮಂಜುನಾಥ ಗೌಡ ಪಾಟೀಲ್, ಡಾ.ರೇಖಾ, ಹಿರಿಯ ಸ್ಟಾಪ್ ನರ್ಸ ಶೈಲಜಾ ಯಾದವ, ಪ್ರಭು ಅಸೂಂಡಿ, ಮಂಜುನಾಥ ಹಳ್ಳಿ, ಲಿಂಗರಾಜ ಬಂಡಿ, ವಿಜಯಲಕ್ಷ್ಮಿ ಬಾವಿಮನಿ, ರವಿ ಬಿರಗೌಡ್ರ, ಉಧಯ ಕಣ್ಣೂರ ಸೇರಿದಂತೆ ಅನೇಕ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
08/03/2022 03:02 pm