ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸ್ವಂ ಪ್ರೇರಿತ ರಕ್ತದಾನ ಶಿಬಿರ ವಕೀಲರ ಸಂಘದ ಕಾರ್ಯಕ್ಕೆ ಜನತೆ ಸಲಾಂ

ಕುಂದಗೋಳ : ಮತ್ತೋಬ್ಬರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕುಂದಗೋಳ ಪಟ್ಟಣದ ವಕೀಲರ ಸಂಘವೂ ವಿಶೇಷ ಕಾರ್ಯವೊಂದನ್ನು ಮಾಡಿ ಇತರರಿಗೆ ಪ್ರೇರಪಣೆ ನೀಡಿದೆ.

ವಕೀಲರ ಸಂಘದ ಆಶ್ರಯದಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡು ಕುಂದಗೋಳ ಪಟ್ಟಣದ ಎಲ್ಲ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ವಿಶೇಷವಾಗಿ ಮಹಿಳಾ ಸಿಬ್ಬಂದಿಗಳು ರಕ್ತದಾನ ಮಾಡಿದರೂ, ಇನ್ನೂ ವಕೀಲರ ಸಂಘದಲ್ಲಿ ರಕ್ತದಾನ ಶಿಬಿರ ಇದೆ ಎಂಬುದನ್ನು ಅರಿತ ಕುಂದಗೋಳ ಪಟ್ಟಣದ ಪತ್ರಕರ್ತರು, ಪೊಲೀಸರು, ಮತ್ತು ಸಾರಿಗೆ ಸಿಬ್ಬಂದಿಗಳು ಸ್ವ ಇಚ್ಚೆಯಿಂದ ರಕ್ತದಾನ ಮಾಡಿ ಇತರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಸಹಕಾರ ನೀಡಿದರು.

ಈಗಾಗಲೇ 50ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ರಕ್ತದಾನ ಮಾಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬೋಬ್ಬರಾಗಿ ಜನ ರಕ್ತದಾನಕ್ಕೆ ಧಾವಿಸುತ್ತಿದ್ದು ವಕೀಲರು ಸಂಘದ ಕಾರ್ಯ ಮಾದರಿಯಾಗಿದೆ.

Edited By : Shivu K
Kshetra Samachara

Kshetra Samachara

12/11/2021 02:41 pm

Cinque Terre

17.08 K

Cinque Terre

0

ಸಂಬಂಧಿತ ಸುದ್ದಿ