ಧಾರವಾಡ: ಧಾರವಾಡ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗಾಮನಗಟ್ಟಿ ಹಾಗೂ ರಾಷ್ಟೋತ್ಥಾನ ರಕ್ತ ಕೇಂದ್ರದ ಸಹಯೋಗದೊಂದಿಗೆ 50ಕ್ಕೂ ಹೆಚ್ಚು ರಾಷ್ಟ್ರೀಯ ಸ್ವಯಂ ಸೇವಕರು ಹಾಗೂ ಗ್ರಾಮದ ಯುವಕರು, ಯುವತಿಯರು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರದ ಮುಖ್ಯ ಅತಿಥಿಯಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೆಟ್ ಚಂದ್ರಶೇಖರ ಮನಗುಂಡಿ, ಪವನ ಸಾರಥಿ, ಈಶ್ವರ ಮಾಳಣ್ಣವರ, ಕರೆಪ್ಪ ಅವರಾದಿ, ಮುಖ್ಯ ಶಿಕ್ಷಕರಾದ ದ್ರಾಕ್ಷಾಯಣಿ ಹಿರೇಮಠ, ರಾಜು ಬೆಂಗೇರಿ, ರಮೇಶ ಕಾಶೀದ, ಚನ್ನಬಸು ಮಾಳಣ್ಣವರ, ಸಂಜು ಮನಗುಂಡಿ, ನಿಂಗಪ್ಪ ಮನಗುಂಡಿ , ಈರಣ್ಣ ಜವಳಿ, ಮಂಜುನಾಥ ಅವರಾದಿ, ಕರೆಪ್ಪ ಮುಮ್ಮಿಗಟ್ಟಿ, ಕಿರಣ್ ಅಂಬಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
26/01/2022 10:59 pm