ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಿರಿಧಾನ್ಯ ಬಳಕೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

ನವಲಗುಂದ : ತಾಲೂಕಿನ ಯಮನೂರು ವಲಯದ ಯಮನೂರು ಕಾರ್ಯಕ್ಷೇತ್ರದ ಗ್ರಾಮ ದೇವತೆ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ ಅವರು ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಸಿರಿಧಾನ್ಯಗಳು ಯಾವವು? ಸಿರಿಧಾನ್ಯಗಳ ಬಳಕೆ ಹೇಗೆ? ಸಿರಿಧಾನ್ಯಗಳಿಂದ ಏನೆಲ್ಲ ಪ್ರಯೋಜನಗಳಿವೆ ಎನ್ನುವ ಬಗ್ಗೆ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನವನ್ನು ತಾಲೂಕಿನ ಯೋಜನಾಧಿಕಾರಿಯಾದ ಓಂ ಮರಾಠೆ ಅವರು ನೀಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಸಿರಿ ಮಾರ್ಕೆಟಿಂಗ್ ಮೇಲ್ವಿಚಾರಕರಾದ ಪಾರ್ವತಿ ಮಾತನಾಡಿ, ಯಾವ ಯಾವ ಕಾಯಿಲೆಗಳಿಗೆ ಯಾವ ಸಿರಿಧಾನ್ಯ ಬಳಕೆ ಅವಶ್ಯಕತೆ ಇದೆ ಎನ್ನುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ಶೆಟ್ಟಿ ವಲಯದ ಮೇಲ್ವಿಚಾರಕರಾದ ವಾಣಿಶ್ರೀ ಸೇವಾ ಪ್ರತಿನಿಧಿಯಾದ ಗೌರಮ್ಮ ಹಾಗೂ ಒಕ್ಕೂಟದ ಅಧ್ಯಕ್ಷರು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/08/2022 07:08 pm

Cinque Terre

18.13 K

Cinque Terre

0

ಸಂಬಂಧಿತ ಸುದ್ದಿ