ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಪ್ಪು ಜನ್ಮದಿನ ಆಚರಿಸಿದ ಪಾನ್‌ಶಾಪ್ ವ್ಯಾಪಾರಿಯಿಂದ ನೇತ್ರದಾನ

ಕುಂದಗೋಳ: ಇಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ 47ನೇ ಜನ್ಮದಿನ. ಈ ಜನ್ಮ ದಿನವನ್ನು ಇಲ್ಲೋರ್ವ ಪಾನ್‌ಶಾಪ್ ವ್ಯಾಪಾರಿ ಶಾಲಾ ಮಕ್ಕಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನೇತ್ರದಾನ ಮಾಡಿ ಆಚರಿಸಿದ್ದಾರೆ.

ಕುಂದಗೋಳ ಪಟ್ಟಣದ ಪಾನ್ ಶಾಪ್ ವ್ಯಾಪಾರಿ ಗುರುಪಾದಯ್ಯ ಹಿರೇಮಠ ಕೇಕ್ ಹಾಗೂ ಜಿಲೇಬಿ ತರಿಸಿ ಶಾಲಾ ಮಕ್ಕಳ ಸಮ್ಮುಖದಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ ಆಚರಿಸಿದ್ದಾರೆ. ಬಳಿಕ ತಂದೆ-ಮಗ ನೇತ್ರದಾನ ಮಾಡಿದರು. ಪಾನ್ ಶಾಪ್ ವ್ಯಾಪಾರಿಯ ಪುನೀತ್ ಅಭಿಮಾನ ನೋಡಿ ಶಾಸಕಿ ಕುಸುಮಾವತಿ ಶಿವಳ್ಳಿ ಪುತ್ರ ಅಮರಶಿವ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಹಿ ಹಂಚಿದರು.

ಈ ವೇಳೆ ಅಮ್ಮಾ ಆಪ್ಟಿಕಲ್ಸ್ ಸಹಯೋಗತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಲು ಪತ್ರಕ್ಕೆ ಸಹಿ ಹಾಕಿ ಅಪ್ಪು ಮೇಲಿನ ಅಭಿಮಾನ ತೋರಿದರು.

Edited By : Manjunath H D
Kshetra Samachara

Kshetra Samachara

17/03/2022 09:38 pm

Cinque Terre

17.57 K

Cinque Terre

0

ಸಂಬಂಧಿತ ಸುದ್ದಿ