ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಪ್ಪು ಜನ್ಮದಿನದ ಪ್ರಯುಕ್ತ ಬೃಹತ್ ಪ್ರಮಾಣದ ನೇತ್ರದಾನ ಶಿಬಿರ

ಹುಬ್ಬಳ್ಳಿ: ಪುನೀತ‌ರಾಜಕುಮಾರ ಅವರ ಹುಟ್ಟು ಹಬ್ಬವನ್ನ ಇಡೀ ರಾಜ್ಯಾದ್ಯಂತ ಅತಿ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯ ನಮ್ಮ ಯುವರತ್ನ ಯುವಕರ ಬಳಗದ ವತಿಯಿಂದ ನಗರದ ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ಆವರಣದಲ್ಲಿ ಬೃಹತ್ ಪ್ರಮಾಣದ ನೇತ್ರದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ನೂರಾರು ಜನರು ನೇತ್ರದಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿಜಯ ಬೆರಗುಡ್ಡ, ಗುರುರಾಜ ಬೇಲೂರ, ಕೃಷ್ಣಾ ಗಂಡಗಾಳೇಕರ, ಜಗದೀಶ ಬುಳ್ಳನವರ, ಅವಿನಾಶ ಹರಿವಾಣ ಸೇರಿದಂತೆ ಅನೇಕ ಯುವಕರು ಸೇರಿಕೊಂಡು ಅರ್ಥಪೂರ್ಣವಾಗಿ ಅಪ್ಪು ಅವರ ಹುಟ್ಟು ಹಬ್ಬ ಆಚರಣೆ ಮಾಡಿದ್ರು..

Edited By : Manjunath H D
Kshetra Samachara

Kshetra Samachara

17/03/2022 05:07 pm

Cinque Terre

14.4 K

Cinque Terre

0

ಸಂಬಂಧಿತ ಸುದ್ದಿ