ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿದ್ದು, ಇದರ ಜೊತೆಗೆ ಕೊರೊನಾ ಸೋಂಕು ಕೂಡ ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಜನತೆ ಎಚ್ಚರಿಕೆ ವಹಿಸಬೇಕು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 53 ವರ್ಷದ ಮಹಿಳೆ, 14 ವರ್ಷದ ಬಾಲಕಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರೂ ಹುಬ್ಬಳ್ಳಿಯವರಾಗಿದ್ದಾರೆ. ಡಿ.17 ರಂದು ಒಬ್ಬರಿಗೆ ಹಾಗು ಡಿ.19 ರಂದು ಮತ್ತೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರೂ ಸೋಂಕಿತರು ಹುಷಾರಾಗಿದ್ದಾರೆ. ಭಯಪಡುವ ಅಗತ್ಯವಿಲ್ಲ. ಹೋಮ್ ಐಸೋಲೇಷನ್‌ಲ್ಲಿ ಇರುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಅವರ ಇನ್ನೂ ಎರಡು ವರದಿಗಳು ನೆಗೆಟಿವ್ ಬರಬೇಕಿದೆ. ರಾಜ್ಯದ ಜೊತೆಗೆ ಜಿಲ್ಲೆಯಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.
ಸದ್ಯ ಓಮಿಕ್ರಾನ್ ಸೋಂಕು ತಗುಲಿರುವ ಬಾಲಕಿಗೆ ವ್ಯಾಕ್ಸಿನೇಷನ್ ಆಗಿಲ್ಲ. 53 ವರ್ಷದ ಮಹಿಳೆಗೆ ಡಬಲ್ ಡೋಸ್ ವ್ಯಾಕ್ಸಿನೇಷನ್ ಆಗಿದೆ. ಇಬ್ಬರಲ್ಲೂ ತೀವ್ರ ಪ್ರಮಾಣದ ಸಿಂಪ್ಟಮ್ಸ್ ಕಂಡು ಬಂದಿಲ್ಲ. ಬಾಲಕಿ ಸಂಪರ್ಕಕ್ಕೆ ಬಂದ 395 ಜನರನ್ನು ಓಮಿಕ್ರಾನ್ ತಪಾಸಣೆಗೆ ಒಳಪಡಿಸಸಲಾಗಿದೆ. ಬಾಲಕಿ ಓದುತ್ತಿದ್ದ ಶಾಲೆಯನ್ನೂ ಬಂದ್ ಮಾಡಲಾಗಿದೆ. ಎಲ್ಲರ ವರದಿ ನೆಗೆಟಿವ್ ಬಂದ ಮೇಲೆ ಶಾಲೆ ಆರಂಭಕ್ಕೆ ಅನುಮತಿ ನೀಡಲಾಗುವುದು ಎಂದರು.
Kshetra Samachara
03/01/2022 11:58 am