ಬೆಂಗಳೂರು: ರಾಜ್ಯದಲ್ಲಿ 62% ಸೆಕೆಂಡ್ ಡೋಸ್ ನೀಡಲಾಗಿದೆ.ನಿನ್ನೆಗೆ ಏಳು ಕೋಟಿ ಐವತ್ತು ಲಕ್ಷ ಡೋಸ್ ಪೂರ್ತಿ ಅಗಿದೆ. ಅತ್ಯಂತ ಹೆಚ್ಚು ಲಸಿಕೆ ಕೊಟ್ಟ ರಾಜ್ಯ ಗಳಲ್ಲಿ ನಮ್ಮದೂ ಒಂದು, ಮುಂದುವರೆದ ದೇಶಗಳಲ್ಲಿ ಕೂಡಾ ಲಸಿಕೆ ತೆಗೆದುಕೊಳ್ಳಲು ಜನ ಹಿಂದೇಟು ಹಾಕ್ತಿದಾರೆ. ನಮಲ್ಲಿ ಲಸಿಕೆ ತೆಗೆದುಕೊಳ್ಳಲು ಬಾಕಿ ಇರುವವರು ಬೇಗ ಬಂದು ತೆಗೆದುಕೊಳ್ಳಲು ಮನವಿ ಮಾಡ್ತೀನಿ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದರು.
ಏರ್ ಪೋರ್ಟ್ ನಲ್ಲಿ ಕೂಡಾ ನಾನು ಹೋಗಿ ಪರಿಶೀಲನೆ ಮಾಡಿದ್ದೇನೆ, ಅಲ್ಲಿ ಕೂಡಾ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡಿಸಿದವರಿಗೆ ಮೂರರಿಂದ ನಾಲ್ಕು ತಾಸಿನಲ್ಲಿ ರಿಸಲ್ಟ್ ಬರುವಂತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದರು.
Kshetra Samachara
02/12/2021 01:52 pm