ಧಾರವಾಡ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೆ.17 ರಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ಕೋವಿಡ್ ಲಸಿಕಾ ಅಭಿಯಾನದಲ್ಲಿ ಧಾರವಾಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಅಂದರೆ 110609 ಜನ ಲಸಿಕೆ ಪಡೆದಿದ್ದಾರೆ. ಆ ಮೂಲಕ ಧಾರವಾಡ ಜಿಲ್ಲೆ ಅತೀ ಹೆಚ್ಚು ಲಸಿಕೆ ಪಡೆದ 3ನೇ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಂದ ಲಸಿಕಾಕರಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡ ಗ್ರಾಮೀಣ ಪ್ರದೇಶದಲ್ಲಿ 18 ರಿಂದ 44 ವರ್ಷ ವಯಸ್ಸಿನವರು ಮೊದಲನೇ ಡೋಸ್ 10882 ಜನ ಪಡೆದರೆ 2691 ಜನ ಎರಡನೇ ಡೋಸ್ ಪಡೆದಿದ್ದಾರೆ.
45 ರಿಂದ 60 ವರ್ಷ ವಯಸ್ಸಿನ 3973 ಜನ ಮೊದಲ ಡೋಸ್ ಪಡೆದರೆ, 1526 ಜನ ಎರಡನೇ ಡೋಸ್ ಪಡೆದಿದ್ದಾರೆ.
60 ವರ್ಷ ಮೇಲ್ಪಟ್ಟ 1872 ಜನ ಮೊದಲ ಡೋಸ್ ಪಡೆದರೆ, 908 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 21852 ಜನ ನಿನ್ನೆ ಲಸಿಕೆ ಪಡೆದಿದ್ದಾರೆ.
ಇಬ್ಬರು ವೈದ್ಯಕೀಯ ಸಿಬ್ಬಂದಿಗೆ 2 ಎರಡನೇ ಡೋಸ್, 22 ಕೋವಿಡ್ ಮುಂಚೂಣಿ ಕಾರ್ಯಕರ್ತರು ಎರಡನೇಯ ಡೋಸ್ ಮತ್ತು
18 ರಿಂದ 44ವರ್ಷ ವಯಸ್ಸಿನವರು ಮೊದಲನೇ ಡೋಸ್ 2775, ಎರಡನೇ ಡೋಸ್ 6737 ಜನ ಪಡೆದಿದ್ದಾರೆ.
45 ರಿಂದ 60 ವರ್ಷ ವಯಸ್ಸಿನ 1113 ಜನ ಮೊದಲ ಡೋಸ್ ಪಡೆದಿದ್ದಾರೆ. 1919 ಜನ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 903 ಜನ ಮೊದಲ ಡೋಸ್ ಪಡೆದರೆ, 1319 ಜನ ಎರಡನೇ ಡೋಸ್ ಪಡೆದಿದ್ದಾರೆ. 14790 ಜನ ಲಸಿಕೆ ಪಡೆದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪ್ರದೇಶದಲ್ಲಿ
ಓರ್ವ ವೈದ್ಯಕೀಯ ಸಿಬ್ಬಂದಿ 2 ಎರಡನೇ ಡೋಸ್ ಪಡೆದಿದ್ದಾರೆ, 53 ಜನ ಕೋವಿಡ್ ಮುಂಚೂಣಿ ಕಾರ್ಯಕರ್ತರು ಎರಡನೇಯ ಡೋಸ್ ಪಡೆದಿದ್ದಾರೆ.
18 ರಿಂದ 44ವರ್ಷ ವಯಸ್ಸಿನ 5018 ಜನ ಮೊದಲ ಡೋಸ್ ಪಡೆದರೆ, 1397 ಜನ ಎರಡನೇ ಡೋಸ್ ಪಡೆದಿದ್ದಾರೆ. 45 ರಿಂದ 60 ವರ್ಷ ವಯಸ್ಸಿನ 1541 ಜನ ಮೊದಲ ಡೋಸ್ ಪಡೆದರೆ, 721 ಜನ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 713 ಜನ ಮೊದಲ ಡೋಸ್ ಪಡೆದರೆ, 333 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 9777 ಜನ ಲಸಿಕೆ ಪಡೆದಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ
ಮೂವರು ವೈದ್ಯಕೀಯ ಸಿಬ್ಬಂದಿ 2 ಎರಡನೇ ಡೋಸ್, 21 ಕೋವಿಡ್ ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್ ಪಡೆದರೆ, 18 ರಿಂದ 44 ವರ್ಷ ವಯಸ್ಸಿನ 8294 ಜನ ಮೊದಲ ಡೋಸ್, 7961 ಜನ ಎರಡನೇ ಡೋಸ್ ಪಡೆದಿದ್ದಾರೆ. 45 ರಿಂದ 60 ವರ್ಷ ವಯಸ್ಸಿನ 1724 ಜನ ಮೊದಲ ಡೋಸ್, 2676 ಜನ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 828 ಜನ ಮೊದಲ ಡೋಸ್ ಪಡೆದರೆ, 1224 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 22731 ಜನ ಲಸಿಕೆ ಪಡೆದಿದ್ದಾರೆ.
ಕಲಘಟಗಿಯಲ್ಲಿ 18 ರಿಂದ 44 ವರ್ಷ ವಯಸ್ಸಿನ 7091 ಜನ ಮೊದಲ ಡೋಸ್ ಪಡೆದರೆ, 1355 ಜನ ಎರಡನೇ ಡೋಸ್ ಪಡೆದಿದ್ದಾರೆ. 45 ರಿಂದ 60 ವರ್ಷ ವಯಸ್ಸಿನ 2877 ಜನ ಮೊದಲ ಡೋಸ್ ಪಡೆದರೆ, 1211 ಜನ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 1574 ಜನ ಮೊದಲ ಡೋಸ್ ಪಡೆದರೆ, 976 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 15084 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.
ಕುಂದಗೋಳದಲ್ಲಿ 18 ರಿಂದ 44 ವರ್ಷ ವಯಸ್ಸಿನ 11933 ಜನ ಮೊದಲ ಡೋಸ್ ಪಡೆದರೆ, 2839 ಜನ ಎರಡನೇ ಡೋಸ್ ಪಡೆದಿದ್ದಾರೆ. 45 ರಿಂದ 60 ವರ್ಷ ವಯಸ್ಸಿನ 51 ಜನ ಮೊದಲ ಡೋಸ್ ಪಡೆದರೆ, 61 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 14890 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.
ನವಲಗುಂದದಲ್ಲಿ ಮೂರು ಜನ ಕೋವಿಡ್ ಮುಂಚೂಣಿ ಕಾರ್ಯಕರ್ತರು ಎರಡನೇಯ ಡೋಸ್ ಮತ್ತು 18 ರಿಂದ 44 ವರ್ಷ ವಯಸ್ಸಿನ 6277 ಜನ ಮೊದಲ ಡೋಸ್, 751 ಜನ ಎರಡನೇ ಡೋಸ್ ಪಡೆದಿದ್ದಾರೆ. 45 ರಿಂದ 60 ವರ್ಷ ವಯಸ್ಸಿನ 2361 ಜನ ಮೊದಲ ಡೋಸ್, 728 ಜನ ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 1009 ಜನ ಮೊದಲ ಡೋಸ್, 356 ಜನ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 11485 ಜನ ಲಸಿಕೆ ಪಡೆದಿದ್ದಾರೆ.
ಒಟ್ಟಾರೆಯಾಗಿ ಸೆಪ್ಟೆಂಬರ್ 17 ರಂದು ಒಂದೇ ದಿನ ಅಂತಿಮವಾಗಿ 110609 ಜನರು ಜಿಲ್ಲೆಯಲ್ಲಿ ಲಸಿಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Kshetra Samachara
18/09/2021 07:12 pm