ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಹೃದ್ರೋಗ, ಕ್ಯಾನ್ಸರ್ ಹಾಗೂ ಮೂತ್ರಪಿಂಡ ಖಾಯಿಲೆ ಆಸ್ಪತ್ರೆ ಸ್ಥಾಪನೆ:ಸಚಿವ ಡಾ.ಕೆ.ಸುಧಾಕರ್

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹುಬ್ಬಳ್ಳಿ ನಗರದಲ್ಲಿ ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸಹಯೋಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮೂತ್ರಪಿಂಡ ಖಾಯಿಲೆ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು‌ ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಕಿಮ್ಸ್) ನೂತನ ಆಡಳಿತ ಭವನ, ಕರ್ಡಿಯಾಲಜಿ(ಹೃದ್ರೋಗ) ಆಸ್ಪತ್ರೆ, ಶವಾಗರ, ಸ್ಕಿಲ್ ಲ್ಯಾಬ್ ಹಾಗೂ ರೆಟಿನಾ ಕ್ಲೀನಕ್ ಗಳ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಿಮ್ಸ್ ನಲ್ಲಿ 19 ಕೋಟಿ ವೆಚ್ಚದ ಆಡಳಿತ ಭವನ, 2.8 ಕೋಟಿ ವೆಚ್ಚದ ಸ್ಕಿಲ್ ಲ್ಯಾಬ್, 6.88 ಕೋಟಿ ವೆಚ್ಚದ ಸುಸಜ್ಜಿತ ಹೃದ್ರೋಗ ಆಸ್ಪತ್ರೆ, 1.1 ಕೋಟಿ ವೆಚ್ಚದ ಆಧುನಿಕ ಶವಗಾರ, 1 ಕೋಟಿ ವೆಚ್ಚದ ರೆಟಿನಾ ಕ್ಲೀನಕ್ ಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರಯತ್ನದಿಂದ ಕಿಮ್ಸ್ ಉತ್ತಮ ದಿಶೆಯಲ್ಲಿ ಸಾಗುತ್ತಿದೆ.

ರಾಜ್ಯದಲ್ಲಿ‌ ಕೋವಿಡ್ ನಿಯಂತ್ರಣದಲ್ಲಿದೆ. ಇದುವರೆಗೆ 1 ಕೋಟಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರ ಕೋವಿಡ್ ಬಾಧಿತರ ಚಿಕಿತ್ಸೆಗಾಗಿ 300 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.

ಐರೋಪ್ಯ ರಾಷ್ಟ್ರಗಳು, ದೆಹಲಿ , ಅಹಮದಾಬಾದ್ ನಗರಗಳಲ್ಲಿ ಕೋವಿಡ್ ರೋಗದ ಎರಡನೇ ಅಲೆ ಕಂಡುಬರುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಮನಿಸುತ್ತಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ರಾಜ್ಯದಲ್ಲಿ ಕೋವಿಡ್ ಬಾಧಿತರ ಸಾವಿನ ಪ್ರಮಾಣ ಹಾಗೂ ಸೋಂಕಿತ ಪ್ರಮಾಣ ಕಡಿಮೆಯಿದೆ.

ಆರೋಗ್ಯ ಕರ್ನಾಟಕ ಆಯುಷ್ಯಮಾನ್ ಭಾರತ ಯೋಜನೆಯಡಿ 1.15 ಲಕ್ಷ ಕುಟುಂಬಗಳಿಗೆ ಜೀವ ಮಿಮೆ ಒದಗಿಸಲಾಗಿದೆ. ಎ.ಪಿ.ಎಲ್ ಕಾರ್ಡು ಹೋಂದಿರುವ ಕುಟುಂಬಗಳು ಇದರ ಲಾಭ‌ ಪಡೆಯುತ್ತಿವೆ.

ಐ.ಸಿ.ಎಂ.ಆರ್ ನಿರ್ದೇಶನದಂತೆ ರಾಜ್ಯದಲ್ಲಿ 185 ಆರ್.ಟಿ.ಪಿ.ಸಿ.ಆರ್ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ 60 ವೈದ್ಯಕೀಯ ಕಾಲೇಜು ಸಹ ಸುಸಜ್ಜಿತ ಲ್ಯಾಬ್ ಸ್ಥಾಪಿಸಿವೆ.

ವೈದ್ಯರಿಗೆ ಆಡಳಿತದಲ್ಲಿ ಪ್ರಾವೀಣ್ಯ ನೀಡಲು ಮಾನವ ಸಂಪನ್ಮೂಲ ತರಬೇತಿ ನೀಡಲಾಗುವುದು. ಕರೋನಾ ಸಂದರ್ಭದಲ್ಲೂ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಲ್ಲಾ ವೈದ್ಯರು, ವೈದ್ಯಕೀಯತರ ಸಿಬ್ಬಂದಿಗೆ ವೇತನ ಹೆಚ್ಚು ಮಾಡಲಾಗಿದೆ.

ರಾಜ್ಯ ಸರ್ಕಾರ ಸಮಗ್ರ ಆರೋಗ್ಯ ನೀತಿ ಜಾರಿಗೆ ತರಲು ಚಿಂತನೆ ನಡೆಸಿದೆ.24*7 ಸೇವೆ ಒದಗಿಸುವ ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹಾಗೂ ಮುಂಬಡ್ತಿ ನೀಡಲು ನಿಯಮ ರೂಪಿಸಲಾಗುತ್ತಿದೆ‌.ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ 2500 ಸಾವಿರ ವೈದ್ಯರ ನೇಮಕಾತಿ ಕ್ರಮಕೈಗೊಳ್ಳಲಾಗಿದೆ. ರಾಜ್ಯದ ಆಸ್ಪತ್ರೆಗಳಿಲ್ಲಿ ಇದ್ದ 6000 ಆಕ್ಸಿಜನ್ ಬೆಡ್ ಗಳನ್ನು ಕೊರೊನಾ ಸಂದರ್ಭದಲ್ಲಿ 31000ಕ್ಕೆ‌ ಹೆಚ್ಬಿಸಲಾಗಿದೆ.

ಕಿಮ್ಸ್ ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ನೀಡಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆಗೆ ‌ನೀಡಿದೆ. ಉತ್ತಮ ಹೆಸರು ಗಳಿಸಿದೆ. ಕಿಮ್ಸ್ ಅಭಿವೃದ್ಧಿಗೆ ಬೇಕಾದ ಎಲ್ಲಾ ಆರ್ಥಿಕ ನೆರವು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ವಾಣಿಜ್ಯ ನಗರ ವನ್ನು ಆರೋಗ್ಯ ನಗರವಾಗಿ ಪರಿವರ್ತನೆ ಮಾಡಲಾಗುವುದು ಎಂದರು.

Edited By : Nagesh Gaonkar
Kshetra Samachara

Kshetra Samachara

21/11/2020 09:59 pm

Cinque Terre

30.52 K

Cinque Terre

0

ಸಂಬಂಧಿತ ಸುದ್ದಿ