ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ಬಗ್ಗೆ ಮೈ ಮರೆಯದೆ ಎಚ್ಚರ ವಹಿಸಲು ನ್ಯಾಯಾಧೀಶರ ಸಲಹೆ

ಕುಂದಗೋಳ : ಕೊರೊನಾ ಹರಡುವಿಕೆ ಪ್ರಮಾಣ ಮತ್ತು ಈ ಕಾರಣದಿಂದ ಉಂಟಾಗುವ ಮರಣಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಆದರೆ ಈ ಕುರಿತು ಮೈ ಮರೆಯದಂತೆ ಕೋವಿಡ್-19 ನಿಯಮಗಳ ಪಾಲನೆಗಳಲ್ಲಿ ಇನ್ನಷ್ಟು ಜಾಗೃತೆ ಅತ್ಯಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶೈನಿ ಕೆ.ಎಂ ಸಲಹೆ ನೀಡಿದರು.

ಕುಂದಗೋಳ ತಾಲೂಕ ಕಚೇರಿಯ ಆವರಣದಲ್ಲಿ ಕೋವಿಡ್-19 ತಡೆಗಟ್ಟುವ ಕುರಿತು ಕಲಾ ತಂಡದಿಂದ ಹಮ್ಮಿಕೊಳ್ಳಲಾಗಿದ್ದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ ನ್ಯಾಯಾಧೀಶ ರವಿ ಬಾಬು ಚೌವ್ಹಾನ, ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ, ತಹಶೀಲ್ದಾರ ಬಸವರಾಜ ಮೆಳವಂಕಿ ತಾಲೂಕ ಆರೋಗ್ಯಾಧಿಕಾರಿ ಭಾಗೀರಥಿ ಮೆಡ್ಲೇರಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಮೇಶ ಗೊಂದಕರ, ವಕೀಲರ ಸಂಘದ ಅಧ್ಯಕ್ಷ ಜಿ.ಬಿ. ಸೊರಟೂರ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

06/11/2020 11:24 am

Cinque Terre

21.3 K

Cinque Terre

0

ಸಂಬಂಧಿತ ಸುದ್ದಿ