ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಕ್ತದಾನ ಮಾಡಿ ರಾಜ್ಯೋತ್ಸವ ಆಚರಣೆ

ಧಾರವಾಡ: ಧಾರವಾಡದ ಶ್ರೀ ಸಾಯಿ ಎಜ್ಯುಕೇಶನಲ್ ಟ್ರಸ್ಟ್ನ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು, ಹೊಂಬೆಳಕು ಫೌಂಡೇಶನ್, ಸಂಕಲ್ಪ ಯುವ ವೇದಿಕೆ ಮತ್ತು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಹಯೋಗದಲ್ಲಿ 65 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೇಜರ್ ಮಂಜು ಗುಪ್ತಾ ಅವರು, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ರಕ್ತದಾನ ಮಹಾದಾನ, ರಕ್ತದಾನಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ, ರಕ್ತದಾನವು ಒಂದು ರೀತಿಯ ಸಮಾಜ ಸೇವೆ ಎಂದರು. ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಶಿ ಮಾತನಾಡಿ, ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಡಾ.ವೀಣಾ ಬಿರಾದಾರ, ಎಲ್ಲಾ ಜಾತಿ, ಕುಲ, ವರ್ಣ, ಧರ್ಮವನ್ನು ಮೀರಿದ್ದು ರಕ್ತದಾನ. ಈ ದಾನ ಒಂದು ಸಮಾಜಮುಖಿ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿ ಎಂದರು.

ಪ್ರಾಚಾರ್ಯ ಪ್ರೊ.ನಾಗರಾಜ ಶಿರೂರ, ಪ್ರೊ.ಬಿ.ವಿ.ಮೋರಂಕರ್, ಪ್ರೊ.ಮೌನೇಶ್ವರ, ಡಾ.ಎಸ್.ಬಿ.ಗಾಡಿ ಸೇರಿದಂತೆ ಇತರರು ಇದ್ದರು.

Edited By : Nagesh Gaonkar
Kshetra Samachara

Kshetra Samachara

02/11/2020 09:52 am

Cinque Terre

28.46 K

Cinque Terre

3

ಸಂಬಂಧಿತ ಸುದ್ದಿ