ಕುಂದಗೋಳ: ಕಳೆದ ಹಲವಾರು ದಿನಗಳಿಂದ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಮನ ಬಂದ ಸಮಯಕ್ಕೆ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಬರುತ್ತಿದ್ದ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಕ್ಲರ್ಕ್‌ಗೆ, ತಾಲೂಕು ಪಂಚಾಯಿತಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಮೊನ್ನೆಯಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಬಗ್ಗೆ ವೀಡಿಯೋ ಸಮೇತ ವರದಿ ಮಾಡಿತ್ತು. ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಲ್.ಜೀವನ್ನವರ ಹಾಗೂ ಕ್ಲರ್ಕ್ ಕಲ್ಲಪ್ಪ ಕಲ್ಲಣ್ಣನ್ನವರ, ಸಮಯ 12 ಕಳೆಯುತ್ತಾ ಬಂದರೂ ಪಂಚಾಯಿತಿಗೆ ಹಾಜರಾಗದೇ ಇರುವ ಬಗ್ಗೆ ವರದಿ ಬಿತ್ತರಿಸಿತ್ತು.
ಈ ವರದಿ ಗಮನಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಹಾಗೂ ಈ ಮೊದಲೇ ಗ್ರಾಮಸ್ಥರು ನೀಡಿದ ದೂರಿನ ಪರವಾಗಿ ಸ್ಥಳೀಯ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಬಿಸಿ ಮುಟ್ಟಿದೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
02/08/2022 10:15 pm