ಧಾರವಾಡ: ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯ ಪ್ರದೇಶಕ್ಕೆ ಧಾರವಾಡ ಜಿಲ್ಲೆಯ ಯಾವುದೇ ವ್ಯಕ್ತಿ ಅಥವಾ ಕುಟುಂಬಸ್ಥರು ಪ್ರವಾಸ ಕೈಗೊಂಡಿದ್ದರೆ, ಆ ಕುರಿತು ಅವರ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರು ಕೂಡಲೇ ಜಿಲ್ಲಾಡಳಿತದ ಉಚಿತ ಸಹಾಯವಾಣಿ ಸಂಖ್ಯೆ 1077 ಸಂಪರ್ಕಿಸಿ ಮಾಹಿತಿ ನೀಡಬೇಕು. ಯಾತ್ರಿಕರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಅಮರನಾಥ ಪ್ರದೇಶದಲ್ಲಿ ಸುರಿಯುತ್ತಿರುವ ಅತಿವೃಷ್ಠಿಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಯಾತ್ರಿಕರ ಸುರಕ್ಷತಾ ಕಾರ್ಯಗಳು ನಡೆಯುತ್ತಿವೆ. ಧಾರವಾಡ ಜಿಲ್ಲೆಯ ಯಾರಾದರೂ ಅಮರನಾಥ ಯಾತ್ರೆ ಕೈಗೊಂಡಿದ್ದರೆ ಆ ಕುರಿತು. ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರ ಸಂರಕ್ಷಣೆ ಮತ್ತು ಸುರಕ್ಷಿತ ವಾಪಸ್ಸಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
09/07/2022 08:59 pm