ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕೋರೋನಾ ಉತ್ತುಂಗದಲ್ಲಿದ್ದ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸೀಲ್ ಡೌನ್ ಮತ್ತು ಲಾಕ್‌ಡೌನ್ ಮಾಡುವ ಹೋಣೆಯನ್ನು ಮಹಾನಗರ ಪಾಲಿಕೆಗೆ ವಹಿಸಲಾಗಿತ್ತು. ಎಲ್ಲಿ ಆರೋಗ್ಯ ಇಲಾಖೆ ಸೂಚಿಸುತ್ತೋ ಆ ಸೋಂಕಿತರ ಪ್ರದೇಶವನ್ನು ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಲಾಗುತ್ತಿತ್ತು. ಅಲ್ಲಲ್ಲಿ ಶಾಮಿಯಾನವನ್ನು ಬಳಕೆ ಮಾಡಲಾಗಿತ್ತು. ಕಳೆದ ವರ್ಷ ಜುಲೈ ಮತ್ತು ಅಗಷ್ಟ ತಿಂಗಳಲ್ಲಿ ಕೋರೋನಾ ಪಾಸೀಟೀವ್ ಪ್ರಕರಣಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಆಗ ಸೀಲ್ ಡೌನ್ ಹೆಚ್ಚಿನ ಪ್ರದೇಶಕ್ಕೆ ಮಾಡಲಾಗಿತ್ತು. ಈದೀಗ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದ ಸಪ್ಲೈಯರ್‌ಗಳ ಬಿಲ್‌ಗಳನ್ನ ಕಂಡು ಜಿಲ್ಲಾಡಳಿತ ಬೆಚ್ಚಿಬಿದ್ದಿದೆ..
ಮಹಾನಗರ ಪಾಲಿಕೆ ಡಿಸಿ ಆಫೀಸ್‌ಗೆ ಸಲ್ಲಿಕೆ ಮಾಡಲಾದ ಬಿಲ್ ಬರೋಬ್ಬರಿ ಒಂದು ಕೋಟಿ ರೂಪಾಯಿ ದಾಟಿದೆ. ಒಂದು ಕೋಟಿ ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ ಬಿಲ್ಲನ್ನು ಪಾಲಿಕೆ ಜಿಲ್ಲಾಡಳಿತಕ್ಕೆ ಅನುದಾನ ಬಿಡುಗಡೆಗಾಗಿ ಕೋರುವ ತಯಾರಿ ನಡೆಸಿದೆ. ಇಷ್ಟೋಂದು ಮೋತ್ತ ಹೇಗೆ?ಏನಿದು ಅಂತಾ ಕೇಳಿದ್ರೇ,ಪಾಲಿಕೆಯ ಆಯುಕ್ತರದ್ದ ಅದೇ ರೆಡಿಮೇಡ್ ಆನ್ಸರ್
ಅವಳಿ ನಗರದ 8 ಜನ ಶಾಮೀಯಾನ ಸಪ್ಲೈಯರ್ಗೆ ಬ್ಯಾರಿಕೇಡ್ ವ್ಯವಸ್ಥೆಗೆ ಈ ಮೋತ್ತ ಪಾವತಿಯಾಗಬೇಕಿದೆ. ಈ ಸಂಭಂಧ ವಲಯ ಕಚೇರಿಗಳ ಸಹಾಯಕ ಆಯುಕ್ತರು ಅಂತಿಮಗೋಳಿಸಿರುವ ಬಿಲ್‌ಗಳನ್ನೇಲ್ಲಾ ಜಮಾ ಮಾಡಿ, ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕಾಗಿದೆ. ವಲಯ ಕಚೇರಿ 7ರಲ್ಲಿ ಅತಿ ಹೆಚ್ಚು ಅಂದರೆ 17.75 ಲಕ್ಷ ರೂಪಾಯಿ ಹಾಗು ವಲಯ ಕಚೇರಿ 3ರಲ್ಲಿ ಅತಿ ಕಡಿಮೆ 3ಲಕ್ಷ ರೂಪಾಯಿ ಬ್ಯಾರಿಕೇಡ್ ವೆಚ್ಚ ಅಂತಾ ಬಿಲ್‌ಗಳನ್ನು ರೆಡಿ ಮಾಡಲಾಗಿದೆ. ಸ್ವತಹ ಮಹಾನಗರ ಪಾಲಿಕೆಯ ಆಯುಕ್ತರೇ ಈ ಬಿಲ್‌ಗಳನ್ನು ಕಂಡು ಬೆರಗಾಗಿದ್ದಾರೆ. ಹೀಗಾಗಿ ತಕ್ಷಣವೇ ಜಿಲ್ಲಾಡಳಿತಕ್ಕೆ ಕಳುಹಿಸಲು ಅವರು ಮುಂದಾಗದೇ, ಮತ್ತೋಮ್ಮೆ ಆಡೀಟ್ ನಡೆಸಲು ತಿರ್ಮಾನಿಸಿದ್ದಾರೆ. ಆದ್ರೆ ಸಾರ್ವಜನಿಕರು ಮಾತ್ರ ಕೋವಿಡ್ ಹೆಸರಲ್ಲಿ ಲೂಟಿ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೇ ಫೆಬ್ರುವರಿ 16ರ ತನಕ ಹುಬ್ಬಳ್ಳಿಯಲ್ಲಿ 9430 ಹಾಗೇ ಧಾರವಾಡದಲ್ಲಿ 6221 ಕೋರೋನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿವೆ. ಕೋರೋನಾ ಪತ್ತೆಯಾದ ಸೋಂಕಿತರ ಮನೆಯಿಂದ ನೂರು ಮೀಟರ್ ಅಂತರದಲ್ಲಿ ಬ್ಯಾರಿಕೇಡ್ ಹಾಕಲಾಗುತ್ತಿತ್ತು. ಎಲ್ಲಾ ಲೋಕೋಪಯೋಗಿ ಇಲಾಖೆಯ ನಿಯಮಾವಳಿಯಂತೆಯೇ ಸೀಲ್ ಡೌನ್ ಮಾಡುವ ಬ್ಯಾರಿಕೇಡ್ ಮತ್ತು ಶಾಮೀಯಾನಕ್ಕೆ ದರ ನಿಗಧಿ ಮಾಡಲಾಗಿದೆಯಂತೆ. ಒಟ್ಟಾರೆ,ಜಿಲ್ಲೆಯಲ್ಲಿ ಬ್ಯಾರಿಕೇಡ್ ಬಿಲ್ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿರೋದಂತೂ ಸತ್ಯ. ಇದರಲ್ಲಿ ಎಷ್ಟು ಮಿಥ್ಯ ಇದೇ ಅಂತಾ ತನಿಖೆ ಬಳಿಕವಷ್ಟೇ ಗೋತ್ತಾಬೇಕಿದೆ....!
Kshetra Samachara
24/02/2021 04:48 pm