ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾರ್ಚ್ 20ಕ್ಕೆ ಡಿಸಿ ಎಲ್ಲಿ ವಾಸ್ತವ್ಯ ಮಾಡ್ತಾರೆ ಗೊತ್ತಾ?

ಧಾರವಾಡ: ಮಾರ್ಚ್ ತಿಂಗಳ ಮೂರನೇ ಶನಿವಾರ (ಮಾ.20) ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಯೋಜನೆಯಡಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಶೀಲ್ದಾರರು ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂಬುದನ್ನು ಪ್ರಕಟ ಮಾಡಲಾಗಿದೆ.

ಮಾರ್ಚ್. 20 ರಂದು ಅಳ್ನಾವರ ತಹಶೀಲ್ದಾರರು ಹಿಂಡಸಗೇರಿ ಗ್ರಾಮದಲ್ಲಿ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರು ಹಳ್ಯಾಳ ಗ್ರಾಮದಲ್ಲಿ, ನಗರ ತಹಶೀಲ್ದಾರರು ಸುತ್ತಗಟ್ಟಿ ಗ್ರಾಮದಲ್ಲಿ, ಕುಂದಗೋಳ ತಹಶೀಲ್ದಾರರು ಗೌಡಗೇರಿ ಗ್ರಾಮದಲ್ಲಿ, ಧಾರವಾಡ ತಹಶೀಲ್ದಾರರು ವನಹಳ್ಳಿ ಗ್ರಾಮದಲ್ಲಿ, ನವಲಗುಂದ ತಹಶೀಲ್ದಾರರು ಅಮರಗೋಳ ಗ್ರಾಮದಲ್ಲಿ, ಅಣ್ಣಿಗೇರಿ ತಹಶೀಲ್ದಾರರು ಶಿಶ್ವಿನಹಳ್ಳಿ ಗ್ರಾಮದಲ್ಲಿ ಮತ್ತು ಕಲಘಟಗಿ ತಹಶೀಲ್ದಾರರು ಶಿವನಾಪುರ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಇನ್ನು ಪ್ರಮುಖವಾಗಿ ಧಾರವಾಡ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರೂ ಕೂಡ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

Edited By : Vijay Kumar
Kshetra Samachara

Kshetra Samachara

20/02/2021 07:50 pm

Cinque Terre

19.56 K

Cinque Terre

0

ಸಂಬಂಧಿತ ಸುದ್ದಿ