ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ

ಕುಂದಗೋಳ : ಭಾರತ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಸಂವಿಧಾನದ ಪರಿಚ್ಚೇದ ಹೇಳುವಂತೆ ಯಾವ ವರ್ಗ ಬಡತನ ದುರ್ಬಲತೆಗೆ ಒಳಪಟ್ಟು ಶೋಷಣೆಗೆ ಒಳಗಾಗುತ್ತದೋ ಅಂತಹ ವರ್ಗಕ್ಕೆ ಮೀಸಲಾತಿ ನೀಡಬೇಕು ಎಂಬ ಅಂಶದಂತೆ ಪಂಚಮಸಾಲಿ ವರ್ಗವು ಈಗಾಗಲೇ ಕೆಳ ಹಂತದಲ್ಲಿದೆ ನಮಗೆ 2ಎ ಮೀಸಲಾತಿ ಒದಗಿಸಬೇಕೆಂದು ವಕೀಲ ಜಿ.ಬಿ.ಸೊರಟೂರು ಹೇಳಿದರು.

ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿ ಸಮಾಜದ ಯುವ ಘಟಕದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ನಮಗೆ ಮೀಸಲಾತಿ ದೊರೆಯದಿದ್ದಲ್ಲಿ ಫೆ.15ಕ್ಕೆ ಸಂವಿಧಾನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ಇನ್ನೋರ್ವ ಯುವ ಮುಖಂಡ ಪ್ರಭುಗೌಡ ಶಂಕಾಗೌಡಶ್ಯಾನಿ ಮಾತನಾಡಿ ಮೀಸಲಾತಿಗಾಗಿ ಎದ್ದಿರುವ ಪಂಚಮಸಾಲಿ ಸಮಾಜದ ಬೆಂಕಿಯ ಕಿಚ್ಚು ಸಂವಿಧಾನಕ್ಕೆ ಆವರಿಸುವ ಮೊದಲೇ ನಮ್ಮನ್ನು ಸೇರಿದಂತೆ ಎಲ್ಲ ವರ್ಗಕ್ಕೂ ಮೀಸಲಾತಿ ನೀಡಿ ಎಂದರು.

ಈ ವೇಳೆ ತಹಶೀಲ್ದಾರ ಬಸವರಾಜ ಮೆಳವಂಕಿ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ವೈಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಯುವ ಘಟಕದವರು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ ಎಂಟ್ರೂವಿ ಹಾಗೂ ಸಮಾಜದ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

02/02/2021 01:47 pm

Cinque Terre

23.93 K

Cinque Terre

3

ಸಂಬಂಧಿತ ಸುದ್ದಿ