ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾರತ ಸರ್ಕಾರ ಸಹಾಯದಿಂದಲೇ ನಾವು ಬದುಕಿ ಬಂದಿದ್ದೇವೆ ಎಂದು ವಿದ್ಯಾರ್ಥಿನಿ ಸಹನಾ...!

ಹುಬ್ಬಳ್ಳಿ: ಉಕ್ರೇನ್ ನಲ್ಲಿ ತುಂಬಾ ಭಯ ಆಗಿತ್ತು. ನಾವು ಬದುಕಿ ಬರುತ್ತೇವೆಯೋ ಇಲ್ಲವೋ ಎಂಬುವುದೇ ಅನುಮಾನವಾಗಿತ್ತು. ಊಟದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಅನುಭವಿಸಿದ್ದೇವೆ. ನವೀನ್ ಸಾವು ನಿಜಕ್ಕೂ ಸಾಕಷ್ಟು ದುಃಖವನ್ನುಂಟು ಮಾಡಿದೆ ಎಂದು ವೈದ್ಯಕೀಯ ವಿದ್ಯಾರ್ಥಿನಿ ಸಹನಾ ಪಾಟೀಲ ಹೇಳಿದರು.

ಉಕ್ರೇನ್ ದೇಶದಿಂದ ಹುಬ್ಬಳ್ಳಿಗೆ ಆಗಮಿಸಿದ ವಿದ್ಯಾರ್ಥಿನಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ನಿಜಕ್ಕೂ ಸಾಕಷ್ಟು ಆತಂಕದ ವಾತಾವರಣ ಇದೆ. ನಾವು ಸುಮಾರು ದಿನ ಬಂಕರ್ ನಲ್ಲಿ ಕಳೆದಿದ್ದೇವೆ. ಉಕ್ರೇನ್ ನಲ್ಲಿರುವ ಭಾರತೀಯರು ತುಂಬಾ ಹೆಲ್ಪ್ ಮಾಡಿದ್ದಾರೆ ಎಂದರು.

ಖಾರ್ಕಿವ್ ಮತ್ತು ಕೀವ್ ಸಿಟಿ ಎರಡು ಕೂಡ ಡೆಂಜರ್ ಆಗಿತ್ತು. ಭಾರತ ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಿದೆ. ಭಾರತ ಸರ್ಕಾರದವರು ಸಾಕಷ್ಟು ಸಹಾಯ ಮಾಡಿದ್ದಾರೆ ಅವರ ಈ ಸಹಾಯವೇ ನಾವು ಬದುಕಿ ಬರಲು ಕಾರಣ ಎಂದು ಅವರು ಹೇಳಿದರು.

ನವೀನ್ ಸಾವಿನ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಆತ್ಮೀಯ ಸ್ನೇಹಿತ ನವೀನ್, ಅವನ ಸಾವು ನಿಜಕ್ಕೂ ನೋವನ್ನುಂಟು ಮಾಡಿದೆ. ಇಬ್ಬರು ಕ್ಲಾಸ್ ಮೇಟ್ ಕೆಎಲ್ಇ ಕಾಲೇಜಿನಲ್ಲಿಯೂ ಕೂಡ ಒಟ್ಟಿಗೆ ಓದಿದ್ದೇವು ಎಂದು ಅವರು ಮೆಲುಕು ಹಾಕಿದರು.

Edited By :
Kshetra Samachara

Kshetra Samachara

07/03/2022 07:36 pm

Cinque Terre

35.8 K

Cinque Terre

6

ಸಂಬಂಧಿತ ಸುದ್ದಿ