ಅಣ್ಣಿಗೇರಿ: ಗಣರಾಜ್ಯೋತ್ಸವ ನಿಮಿತ್ಯ ಕೇಂದ್ರ ಸರ್ಕಾರ ಪದ್ಮ ಶ್ರೀ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಷಿ ಸಲಕರಣೆಯಾದ ಬಿತ್ತುವ ಕೂರಿಗೆಯನ್ನು ಸಂಶೋಧನೆ ಮಾಡಿದ್ದು, ಈಗಾಗಲೇ ರಾಜ್ಯ ಸರ್ಕಾರದಿಂದ ಅನೇಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಈಗ ಮತ್ತೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ರಾಜ್ಯ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಹೆಮ್ಮೆಯ ವಿಷಯವಾಗಿದೆ.
ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇವರು ಸಂಶೋಧನೆ ಮಾಡಿರುವ ಕೃಷಿ ಸಲಕರಣೆಗಳು ಬಹಳ ಬೇಡಿಕೆ ಇರುತ್ತದೆ. ಕೃಷಿ ಇಲಾಖೆಯ ಈವರೆಗೂ ಸಹಾಯಧನದಡಿ ಒಟ್ಟು 6ಲಕ್ಷ ರೂ.ಅಂದಾಜು ಮೊತ್ತದ ನಡಕಟ್ಟಿನ ಕೂರಿಗೆ ವಿತರಿಸಲಾಗಿದೆ. ಇನ್ನು ಕಳೆದ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ಒದಗಿರುವುದು ರೈತರ ಆಕರ್ಷಣೆಗೆ ಕಾರಣವಾಗಿದೆ.
Kshetra Samachara
25/01/2022 10:12 pm