ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರೈತ ಭವನದಲ್ಲಿ ಹಲವು ಬೇಡಿಕೆಗಳಿಗಾಗಿ ಮನವಿ

ನವಲಗುಂದ: ಮಲಪ್ರಭೆಗೆ ಮಹದಾಯಿ ನೀರನ್ನು ಶೀಘ್ರವೇ ಕೂಡಿಸಲು ಕಾರ್ಯಾರಂಭ ಮಾಡಬೇಕು ಎಂದು ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ನವಲಗುಂದ ಪಟ್ಟಣದ ರೈತ ಭವನದಲ್ಲಿ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.

ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ನೀಡಿದ್ದು, ಪರಿಹಾರ ಎಲ್ಲಾ ರೈತರಿಗೂ ತಲುಪಿಲ್ಲ. ತಕ್ಷಣವೇ ಉಳಿದ ರೈತರಿಗೆ ಹಣ ನೀಡಬೇಕು. ಕಳೆದ ವರ್ಷ ಬೆಳೆ ಹಾನಿಗೆ ಕೊಟ್ಟಂತೆ ಏಕ ರೂಪ ಬೆಳೆ ಹಾನಿ ಕೊಡಬೇಕು. 72 ಗಂಟೆಗಳಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ ಇದುವರೆಗೂ ದೊರೆತಿಲ್ಲ. ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಗಳನ್ನು ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶುಭಷ್ ಚಂದ್ರಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಮಲ್ಲಪ್ಪ ಬಸೆಗಣ್ಣವರ, ಬಸನಗೌಡ ಫಕಿರಗೌಡರ, ಯಲ್ಲರಡ್ಡಿ ಹೊನ್ನಾಳ, ಗೋವಿಂದರಡ್ಡಿ ಮೊರಬದ, ಬಸವರಾಜ ಬೆಳ್ಳಳ್ಳಿ, ಸಿದ್ದಪ್ಪ ತೋಟದ, ಯಲ್ಲಪ್ಪ ದಾಡಿಬಾವಿ, ಸಂಗಪ್ಪ ನಿಡುವಣಿ, ಇಮಾಮ್ ಸಾಬ್, ಹುಸೇನ್ ಸೇರಿದಂತೆ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

29/09/2022 06:05 pm

Cinque Terre

45.1 K

Cinque Terre

0

ಸಂಬಂಧಿತ ಸುದ್ದಿ