ಧಾರವಾಡ : ಸಾಧಕಿ ಸಿಂಧುತಾಯಿ " ಅನಾಥರ ಮಾಯಿ '' ಭಾನುವಾರ ಧಾರವಾಡ ಸೃಜನಾ ರಂಗಮಂದಿರಕ್ಕೆ ಬರ್ತಾ ಇದ್ದಾರೆ.
ಹಂಗಂದ್ರ ಆ ಸಿಂಧುತಾಯಿ ಯಾರು? ಅವರ ಸಾಧನೆ ಹೆಂತಾದ್ದು? ಈಗ ಎಲ್ಲಿದ್ದಾರ? ಹಿಂತಾವ ಸಾಕಷ್ಟು ಕೂತೂಹಲ ನಿಮಗೂ ಇರಬೇಕಲ್ಲ?
ಅದನ್ನ ತಿಳಕೋಬೇಕಂದ್ರ, ಡಿಸೆಂಬರ 05 ರಂದು ಭಾನುವಾರ ಸಂಜೀಕ 6-30 ಸೃಜನಾ ರಂಗಮಂದಿರಕ ಬರ್ರಿ..ಖ್ಯಾತ ರಂಗಕಲಾವಿದ, ನಿರ್ದೇಶಕ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರು ತಮ್ಮ ನಾಟಕದ ಮೂಲಕ " ಅನಾಥರ ಮಾಯಿ '' ಯನ್ನ ಧಾರವಾಡಕ್ಕ ಕರ್ಕೊಂಡ ಬರ್ತಾರ.
ಹುಬ್ಬಳ್ಳಿಯ ಸುನಿಧಿ ಕಲಾ ಸೌರಭ ಸಂಸ್ಥೆಯವರು ನಿಮಗಾಗಿ ಫ್ರೀ ನಾಟಕಾ ಇಟ್ಟಾರ. ನಾಟಕ ಬರೋಬ್ಬರಿ ಸಂಜಿ 6-30 ಸುರು ಆಗ್ತದ ಮತ್ತ. ಅರ್ಧಾ ತಾಸ ಮೊದ್ಲ ಬಂದ ಸೀಟ್ ಹಿಡ್ಕೋಡ್ರಿ ಇಲ್ಲಾಂದ್ರ ನಿಂತ ನೋಡಬೇಕಾತದ.
Kshetra Samachara
04/12/2021 06:51 pm