ಹುಬ್ಬಳ್ಳಿ: ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸುವರ್ಣ ಚತುಷ್ಪಥ ಹೆದ್ದಾರಿಯಲ್ಲಿ ಕಾರು ಪಯಣ ಮಾಡುವ ಮೂಲಕ ನಾಲ್ವರು ಲಿಮ್ಕಾ ದಾಖಲೆ ಮಾಡಿದ್ದಾರೆ. ಹವ್ಯಾಸದ ಮೂಲಕ ನಡೆಯುತಿದ್ದ ಜಾಲಿ ರೈಡ್ ಈಗ ದಾಖಲೆಗೆ ಪ್ರೇರಣೆಯಾಗಿದೆ.
ಸುಹಾಸ ಕುಲಕರ್ಣಿ, ಸುದೀಪ್,ಕುಶಾಲ್ ಬೋಲಮಲ್, ಶ್ರೀನಿವಾಸ ಜಾದವ ಎಂಬುವ ನಾಲ್ವರು ಅತ್ಯಂತ ಕಡಿಮೆ ಅವಧಿಯಲ್ಲಿಯೇ 5962 ಕಿಲೋಮೀಟರ್ ಸುವರ್ಣ ಚತುಷ್ಪಥ ರಸ್ತೆಯಲ್ಲಿ ಕಾರ್ ಪ್ರಯಾಣದ ಮೂಲಕ ದಾಖಲೆ ಮಾಡಿದ್ದಾರೆ. 73 ಗಂಟೆ 53 ನಿಮಿಷಗಳ ಅವಧಿಯಲ್ಲಿ 5962 ಕಿಲೋಮೀಟರ್ ಪರ್ಯಟನೆ ಮಾಡಿದ್ದು, ಈ ಹಿಂದೆ ಇದ್ದ ದಾಖಲೆಯನ್ನು ಬ್ರೇಕ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರನ್ನು ಅಚ್ಚೊತ್ತಿದ್ದಾರೆ.
ಇನ್ನೂ ನಾಲ್ವರಲ್ಲಿ ಮೂವರು ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬರು ಹೈ ಕೋರ್ಟ್ ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದು, ಮೊದಲೆಲ್ಲ ಸೈಕಲ್, ಬೈಕ್ ಮೂಲಕ ರೈಡಿಂಗ್ ಮಾಡುತ್ತಿದ್ದವರು ಈಗ audi ಕಾರ್ ಮೂಲಕ ಸಾಹಸ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ. ಮುಂಬೈನಿಂದ ಪ್ರಾರಂಭಗೊಂಡ ಸಾಹಸ ಪ್ರಯಾಣ ದೆಹಲಿ, ಚೆನ್ನೈ, ಕೊಲ್ಕತ್ತಾ ಮತ್ತು ಮುಂಬೈ ಮೆಟ್ರೊ ನಗರದ ಮೂಲಕ ಪ್ರಯಾಣಿಸುವ ಮೂಲಕ ಸಾಹಸವನ್ನು ಮೆರೆದಿದ್ದಾರೆ.
ಒಟ್ಟಿನಲ್ಲಿ ಯುವ ಉತ್ಸಾಹಿಗಳಲ್ಲಿ ಸಾಹಸ ಪ್ರಯಾಣದ ಬಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಕ್ರೇಜ್ ಇದ್ದೆ ಇರುತ್ತದೇ ಇಂತಹ ಸಾಹಸ ಪ್ರಯಾಣದ ಮೂಲಕ ದಾಖಲೆ ನಿರ್ಮಿಸಿರುವುದು ನಿಜಕ್ಕೂ ವಿಶೇಷವಾಗಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
09/10/2021 04:29 pm