ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ಕೂಟಿ ಮೇಲೆ ದೇಶ ಪರ್ಯಟನೆ ಮಾಡುವ ಯುವಕ..!

ಧಾರವಾಡ: ಸಾಮಾನ್ಯವಾಗಿ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳನ್ನು ತೆಗೆದುಕೊಂಡು ದೇಶ ಸುತ್ತುವ ಪ್ರವಾಸಿಗರನ್ನು ನಾವು ನೋಡಿಯೇ ಇರುತ್ತೇವೆ. ಆದರೆ, ಧಾರವಾಡದ ಯುವಕನೋರ್ವ ಸ್ಕೂಟಿ ತೆಗೆದುಕೊಂಡು ದೇಶ ಪರ್ಯಟನೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾನೆ.

ಹೀಗೆ ಫೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ದುರ್ಗಾಪ್ರಸಾದ್ ಪವಾರ್ ಧಾರವಾಡದ ಸಾಧನಕೆರೆ ನಿವಾಸಿ. ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಮುಗಿಸಿರುವ ಇವರಿಗೆ ದೇಶ ಪರ್ಯಟನೆ ಮಾಡುವುದು ಎಂದರೆ ಎಲ್ಲಿಲ್ಲದ ಖುಷಿ.

ವಿಶೇಷ ಅಂದ್ರೆ ಇವರು ಒಬ್ಬರೇ ಸ್ಕೂಟಿ ತೆಗೆದುಕೊಂಡು ದೇಶ ಪರ್ಯಟನೆ ಮಾಡುತ್ತಾರೆ. ಜೂನ್ 6 ರಂದು ತಮ್ಮ ಆ್ಯಕ್ಟಿವ್ ಹೊಂಡಾ ಸ್ಕೂಟಿ ತೆಗೆದುಕೊಂಡು ಪ್ರವಾಸ ಆರಂಭಿಸಿದ್ದ ದುರ್ಗಾಪ್ರಸಾದ್, ಮಹಾರಾಷ್ಟ್ರ ಮೂಲಕ ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು, ಕಾಶ್ಮೀರ್ ಲೇಹ್, ಲಡಾಖ್, ಮನಾಲಿ, ಹಿಮಾಚಲಪ್ರದೇಶ, ಹರಿಯಾಣದಲ್ಲಿ ಸಂಚಾರ ಮಾಡಿದ್ದಾರೆ.

ಇವರು ಈ ದೇಶ ಪರ್ಯಟನೆಯನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ. ಹೀಗೆ ದೇಶ ಸಂಚಾರ ಮಾಡಿ ಅಲ್ಲಿನ ಜನ ವಸತಿ, ಸಂಪ್ರದಾಯ, ಉಡುಗೆ ತೊಡುಗೆ, ಆಹಾರ ಪದ್ಧತಿ ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಇವರ ಹವ್ಯಾಸ.

Edited By : Somashekar
Kshetra Samachara

Kshetra Samachara

20/06/2022 05:01 pm

Cinque Terre

40.89 K

Cinque Terre

14

ಸಂಬಂಧಿತ ಸುದ್ದಿ