ನವಲಗುಂದ : ರಸ್ತೆಯುದ್ಧಕ್ಕೂ ಹಳದಿ ಪೇಟಾ, ಕೈಯಲ್ಲಿ ಡೋಲ್ ಹಾಗೂ ತಮಟೆ, ರಾಷ್ಟ್ರ ಧ್ವಜದೊಂದಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಕೇಸರಿ ಧ್ವಜಗಳ ಹಾರಾಟ. ಎಲ್ಲೆಲ್ಲೂ ಸಂಭ್ರಮದ ವಾತಾವರಣ, ಇಂತದೊಂದು ಸಡಗರಕ್ಕೆ ಇಂದು ಸಾಕ್ಷಿಯಾಗಿತ್ತು ನವಲಗುಂದ ಪಟ್ಟಣ.
ಹೌದು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ 226ನೇ ಜಯಂತೋತ್ಸವವದ ಅಂಗವಾಗಿ ವಿಜೃಂಭಣೆಯಿಂದ ನಡೆದ ಭವ್ಯ ಮೆರವಣಿಗೆಯೂ ಮಾಜಿ ಸಚಿವ ಕೆ.ಎನ್ ಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಡೋಲ್‌ನ ಮೇಳದೊಂದಿಗೆ ಆರಂಭವಾದ ಮೆರವಣಿಗೆ ನವಲಗುಂದ ಪಟ್ಟಣದ ಲಾಲಗುಡಿ ಶ್ರೀ ಮಾರುತಿ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಲಿಂಗರಾಜ ವೃತ್ತ, ಬಸ್ ನಿಲ್ದಾಣ, ಗಣಪತಿ ದೇವಸ್ಥಾನ ಮಾರ್ಗವಾಗಿ ಗಾಂಧೀ ಮಾರುಕಟ್ಟೆಗೆ ತಲುಪಿತು.
ಈ ವೇಳೆ ತಾಲೂಕಿನ ಕುರುಬ ಸಮಾಜದವರು, ವಿವಿಧ ಕನ್ನಡ ಪರ ಸಂಘಟನೆ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿಗಳು ಸೇರಿದಂತೆ ನೂರಾರು ಜನರು ಈ ವೈಭವದಲ್ಲಿ ಡೋಲ್‌ನ ಮೆರವಣಿಗೆಯನ್ನು ಕಣ್ತುಂಬಿ ಕೊಂಡರು.
Kshetra Samachara
15/08/2022 08:02 pm