ಹುಬ್ಬಳ್ಳಿ: ಸಸ್ಪೆನ್ಷನಲ್ ಸ್ಟೋರಿ ಆಧಾರಿತ, ಎದಿತ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣಗೊಂಡಿರುವ ಗಿರ್ಕಿ ಚಿತ್ರ ರಾಜ್ಯಾದ್ಯಂತ ಜುಲೈ 08ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಟ ತರಂಗ ವಿಶ್ವ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಂಟರ್ಟೈನ್ಮೆಂಟ್, ಕಾಮಿಡಿ, ಥ್ರಿಲ್ಲರ್ ಕಥೆಯನ್ನು ಆಧರಿಸಿದ ಕಥಾ ಹಂದರದಲ್ಲಿ ನಿರ್ಮಾಣಗೊಂಡಿರುವ ಚಿತ್ರ ಜನರಿಗೆ ಹೊಸ ಮನರಂಜನೆ ನೀಡಲು ಸಿದ್ಧವಾಗಿದ್ದು, ಜುಲೈ 08ರಂದು ಅಂತರರಾಜ್ಯ ಸೇರಿದಂತೆ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ ಎಂದರು.
ಗಿರ್ಕಿ ಚಿತ್ರದ ಟೈಟಲ್ ಆದರಿಸಿ ಹೊಸ ಪ್ರಯತ್ನದ ಮೂಲಕದ ಸಿನಿಪ್ರೀಯರನ್ನು ಚಿತ್ರಮಂದಿರಕ್ಕೆ ಕರೆತರುವ ಕಾರ್ಯವನ್ನು ಮಾಡಿದ್ದು,ಹೊಸ ಪ್ರಯತ್ನದಲ್ಲಿ ಮೂಡಿ ಬಂದಿದೆ ಎಂದು ತರಂಗ ವಿಶ್ವ ಹೇಳಿದರು.
Kshetra Samachara
25/06/2022 02:00 pm