ಧಾರವಾಡ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿರುವ ಶಿಕ್ಷಣ ಕಾಶಿ ಧಾರವಾಡ ಸ್ಪರ್ಧಾತ್ಮಕ ಕ್ಷೇತ್ರದಲ್ಲಿಯೂ ಕೂಡ ತನ್ನ ಸಾಧನೆಯನ್ನು ಮುಂದುವರೆಸಿದೆ. ಇದಕ್ಕೆ ಪೂರಕವಾಗಿ ಧಾರವಾಡದ ಅರ್ಜುನ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು JEE ಅಡ್ವಾನ್ಸ್ಡ್-2022 ಹಾಗೂ JEE MAINS II-2022ರಲ್ಲಿ ಸಾಧನೆ ಮಾಡಿದ್ದಾರೆ.
ಹೌದು.. ಧಾರವಾಡದ ಅರ್ಜುನ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು JEE ಅಡ್ವಾನ್ಸ್ಡ್-2022ರಲ್ಲಿ ನಮನ್ ಭಟ್ 7780(All India Rank), ಆದಿತ್ಯ.ಎಂ.ಭಟ್ 10076(All India Rank) ಪಡೆದಿದ್ದು, ಕಾಲೇಜಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಇನ್ನೂ JEE ಮೆನ್ಸ್ ನಲ್ಲಿ ಆಲ್ ಇಂಡಿಯಾ ರ್ಯಾಂಕ್ ನಲ್ಲಿ ಆಕಾಶ ಅಗಡಿ(752), ಅಕ್ಷಯ ನಾಯಕ್(789), ರಾಕೇಶ್ ಬಾಳೆರಿ(612), ಪ್ರಸನ್ನಕುಮಾರ್(363), ಸುರೇಶ ಆಲೂರ್(387) ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಒಟ್ಟಿನಲ್ಲಿ ಜೆಇಇ ಅಡ್ವಾನ್ಸ್ಡ್ ಹಾಗೂ ಮೆನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
14/09/2022 12:51 pm