ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಹುಬ್ಬಳ್ಳಿ: ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಹಯೋಗದಲ್ಲಿ ನಡೆಯುತ್ತಿರುವ ವೇಮನ ವಿದ್ಯಾವರ್ಧಕ ಸಂಘದ ಕೆ ಎಚ್ ಪಾಟೀಲ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕರ್ನಾಟಕ ಮಿನರಲ್ ಕಾರ್ಪೊರೇಷನ್, ಬೆಂಗಳೂರು ನ ನಿರ್ದೇಶಕ ಹಾಗೂ ಬಿ ವಿ ಬಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ ಆರ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ತಮ್ಮ ಭವಿಷ್ಯದ ಕಡೆಗೆ ಗಮನಹರಿಸಬೇಕು ಹಣದ ಹಿಂದೆ ಬೀಳದೆ ಸಾಮಾಜಿಕ ಜವಾಬ್ದಾರಿ ಪಾಲಿಸಬೇಕು, ಅತಿ ಒತ್ತಡಕ್ಕೆ ಒಳಗಾಗದೇ ಪರೀಕ್ಷಾ ತಯಾರಿ ಮಾಡಿಕೊಳ್ಳಬೇಕು ಎಂದರು.

ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ ಅಶೋಕ ಇಟಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯರು ಎಸ್ ಬಿ ಸನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವಿದ್ಯಾಲಯದಲ್ಲಿ ನಿಮಗೆ ಕಾಣದ ಮುತ್ತು, ರತ್ನಗಳು ಅಕ್ಷರ, ಜ್ಞಾನ, ವ್ಯಕ್ತಿತ್ವ ಮುಂತಾದವು ದೊರೆಯುತ್ತವೆ. ನಿಮಗೆ ಬೇಕಾದಷ್ಟು ಪಡೆದುಕೊಳ್ಳಬೇಕು ನಂತರ ಮರುಗಬೇಡಿ ಎಂದರು, ವಿಭಾಗದ ಸಹ ಸಂಯೋಜಕರು ಡಾ. ಶಿವರಾಮ್ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಅತಿ ಹೆಚ್ಚು ಅಂಕ ಪಡೆದ ಕುಮಾರಿ ಅನನ್ಯ ಕರ್ಪೂರ ಮತ್ತು ಇತರ ಹತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀ ಶಂಕರ ಕುಂಬಾರ, ಎಚ್. ಎಚ್ ಕಿರೆಸೂರ, ಭೋದಕ ಭೋದಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

13/07/2022 10:50 am

Cinque Terre

41.04 K

Cinque Terre

0

ಸಂಬಂಧಿತ ಸುದ್ದಿ