ಹುಬ್ಬಳ್ಳಿ: ಬೆಳಗಾವಿಯವ Gogte Institute of Technology ವತಿಯಿಂದ ಆಯೋಜಿಸಲಾಗಿದ್ದ ADVAITH-2022 ಸ್ಪರ್ಧೆಯಲ್ಲಿ ಹುಬ್ಬಳ್ಳಿ ಕೆಎಲ್ಇ ಟೆಕ್ ಕಾಲೇಜಿನ ಬಿಬಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಹೊರ ಹೊಮ್ಮುವ ಮೂಲಕ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ.
ಹೌದು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯದ BBA II ಸೆಮಿಸ್ಟರ್ ವಿದ್ಯಾರ್ಥಿಗಳು 7 ಮತ್ತು 8th ಜುಲೈ 2022 ರಂದು ವಾರ್ಷಿಕ ಈವೆಂಟ್ ADVAITH-2022 ರ ಭಾಗವಾಗಿ MBA ವಿಭಾಗದ ವತಿಯಿಂದ Gogte Institute of Technology ಬೆಳಗಾವಿಯ ಆಯೋಜಿಸಿದ ವ್ಯಾಪಾರ ಯೋಜನೆ ಸ್ಪರ್ಧೆಯಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ವಿವಿಧ ಯುಜಿ ಮತ್ತು ಪಿಜಿ ಕೋರ್ಸ್‌ಗಳಿಂದ 48 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ವಿದ್ಯಾರ್ಥಿಗಳಾದ ನಿಶಾ ಪೇಠೆ ಮತ್ತು ಕೌಶಿಕ್.ಬಿ.ಶೆಟ್ಟಿ ತಂಡವು 5 ಸುತ್ತಿನ ಸ್ಪರ್ಧೆಯ ನಂತರ ಈ ಬಹುಮಾನವನ್ನು ಪಡೆದುಕೊಂಡಿತು.
ಇನ್ನೂ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್‌ನ ನಿರ್ದೇಶಕರು, ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
09/07/2022 08:55 pm