ಕುಂದಗೋಳ: ಇಲ್ಲೊಂದು ಶಾಲೆಯಲ್ಲಿ ಅಣುಕು ಮತದಾನ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ಮತದಾನದ ಅರಿವನ್ನು ಮೂಡಿಸಲಾಗಿದೆ.
ಹೌದು. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ವಿಧಾನಸಭೆ ಮಾದರಿ ಸಾರ್ವತ್ರಿಕ ಅಣುಕು ಮತದಾನ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಂದ ಮತದಾನ ಮಾಡಿಸಿದ್ದಾರೆ. 2021-22ನೇ ಸಾಲಿನ ಶಾಲಾ ಸಂಸತ್ತು ರಚಿಸಿ ಮಕ್ಕಳು ಅಣುಕು ಮತದಾನ ಮಾಡಿ ಅಭ್ಯರ್ಥಿ ಆಯ್ಕೆ ಮಾಡಿದರು.
ಇಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಚಿಹ್ನೆ, ಅಭ್ಯರ್ಥಿ, ಮತದಾನ, ಹಾಗೂ ಪೊಲೀಸ್ ಭದ್ರತೆಯಲ್ಲಿ ಚುನಾವಣೆ ನಡೆಸಿದ ಶಿಕ್ಷಕರು
ಮಕ್ಕಳಲ್ಲಿ ಉತ್ಸಾಹ ತುಂಬಿ ಜನರ ಮೆಚ್ಚುಗೆ ಗಳಿಸಿದರು.
Kshetra Samachara
24/06/2022 07:13 pm