ಕುಂದಗೋಳ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನೂಲ್ವಿಯ ಗಂಗಾಧರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಕುಂದಗೋಳ ತಾಲೂಕಿನ ಹಿರೇಬೂದಿಹಾಳ ಗ್ರಾಮ ಕುಮಾರಿ, ಚೇತನಾ ಬರಮಗೌಡ ದ್ಯಾಮನಗೌಡ್ರ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದಿದ್ದಾಳೆ.
ಭರಮಗೌಡ ದ್ಯಾಮವಗೌಡ್ರ ಅವರ ಮಗಳಾದ ಚೇತನಾ ಮೇ.28 ರಿಂದ ಏ.11 ರವರೆಗೆ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಬರೆದು ಕನ್ನಡ ಭಾಷೆಯಲ್ಲಿ 105, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 92, ಸಮಾಜ ವಿಜ್ಞಾನ 100 ಅಂಕ ಪಡೆದುಕೊಂಡಿದ್ದಾಳೆ.
ಒಟ್ಟು 625 ಕ್ಕೆ 597 ಅಂಕ ಪಡೆದು ಡಿಸ್ಟಿಂಗ್ನಶನ್ ನಲ್ಲಿ ಪಾಸ್ ಆಗುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಹೆಸರು ತಂದಿದ್ದಾಳೆ. ಇವಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದೆ. ಬಾಲಕಿಯ ಸಾಧನೆಗೆ ಕುಂದಗೋಳ ನೆನಪು ಪೌಂಡೇಶನ್ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದೆ.
Kshetra Samachara
19/05/2022 08:40 pm