ಅಳ್ನಾವರ : ಎನ್,ಇ,ಎಸ್ ಶಾಲೆ ಯಲ್ಲಿ ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ತಹಶೀಲ್ದಾರ್ ಅಮರೇಶ ಪಮ್ಮಾರ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ವಿಶೇಷ ಅತಿಥಿ ಯಾಗಿ ಆಗಮಿಸಿದ ಬೆನಚಿ ಗ್ರಾ,ಪಂ ಮಾಜಿ ಅಧ್ಯಕ್ಷ ಸಂದೀಪ ಪಾಟೀಲ್ ಮಾತನಾಡಿ ಮುಂಬರುವ ದಿನಗಳು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ತರಲಿ ಯಾವುದೇ ಧರ್ಮ,ಜ್ಯಾತಿಗೆ ಸೀಮಿತಗೊಳ್ಳದೆ ಕಲಿಕೆಗೆ ಮಾತ್ರ ಅವಕಾಶ ಕೊಡಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಪ್ರಾಚಾರ್ಯ ಬಿ,ಎಲ್,ಪಾಟೀಲ್,ದೈಹಿಕ ಶಿಕ್ಷಕರಾದ ರವಿ ಮುಗಳಿಹಾಳ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Kshetra Samachara
22/03/2022 07:23 pm