ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಟ್ರಿಕ್ ಫಲಿತಾಂಶ ಮಕ್ಕಳೆಲ್ಲಾ ನಾ ಪಾಸ್ ನೀ ಪಾಸ್, ನಮ್ಮವ್ವನೂ ಪಾಸ್.!

ಕಲಘಟಗಿ: ಶಾಲೆ ಆರಂಭ, ಪರೀಕ್ಷೆ ವಿಳಂಬ ಹೀಗೆ ಹಲವಾರು ಕುತೂಹಲಕ್ಕೆ ಗ್ರಾಸವಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳು ಮುಖದಲ್ಲಿ ಸಂಭ್ರಮ ಕಂಡು ಬಂದಿದೆ.

ಈ ಸಂಭ್ರಮದ ನಡುವೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಮಹಾದೇವಿ ನಾಯ್ಕರ್ ಎಂಬ ಗೃಹಿಣಿ ತಮ್ಮ 46ನೇ ವಯಸ್ಸಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯನ್ನು ಈ ಪ್ರಸಕ್ತ ವರ್ಷ ಬರೆದು ಪಾಸ್ ಮಾಡಿ "ಸಿ" ಗ್ರೇಡ್ ಪಡೆದಿದ್ದಾರೆ. 1985ರಲ್ಲಿ ಮಹಾದೇವಿ ನಾಯ್ಕರ್ ಅವರು ಬಡತನದ ಬೇಗೆಗೆ ಸಿಲುಕಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ಕನಸನ್ನು ಕೈ ಬಿಟ್ಟಿದ್ದರು. ಆದರೆ ಈಗ ಮಹಾದೇವಿ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಮನೆಯಲ್ಲಿ ಸಂಭ್ರಮದ ಜೊತೆ ಕಾಲೇಜು ಕನಸಿನ ಆಸೆ ಸಹ ಚಿಗುರೊಡೆದಿದೆ.

Edited By : Vijay Kumar
Kshetra Samachara

Kshetra Samachara

09/08/2021 10:35 pm

Cinque Terre

13.37 K

Cinque Terre

1

ಸಂಬಂಧಿತ ಸುದ್ದಿ