ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಾಲೆ ಬಿಟ್ಟ ಮಕ್ಕಳ ಮನೆಗೆ ಧಾವಿಸಿದ ಶಿಕ್ಷಕ ಬಳಗ

ಕುಂದಗೋಳ : ತಾಲೂಕಿನ ಸಂಶಿ ಗ್ರಾಮದಲ್ಲಿ ಕೊರೊನಾ ಕಳೆದು ಶಾಲೆಗಳು ಪುನರಾಂಭವಾದರೂ ಶಾಲೆಯಿಂದ ದೂರ ಉಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವಂತೆ ಗ್ರಾಮದ ಶ್ರೀ ಫಕೀರ ಶಿವಜೋಗಿಶ್ವರ ಪ್ರೌಢಶಾಲೆಯ ಶಿಕ್ಷಕರ ತಂಡ ಪಾಲಕರಲ್ಲಿ ತಿಳುವಳಿಕೆ ಮೂಡಿಸಿತು.

ಶಾಲೆಯಿಂದ ಬಿಟ್ಟಂತಹ ಪ್ರತಿ ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಶಿಕ್ಷಕರ ತಂಡ ತೆರಳಿ, ವಿದ್ಯಾರ್ಥಿಗಳೇ ಶಾಲೆಗೆ ಬನ್ನಿ, ಅನಗತ್ಯವಾಗಿ ಸಮಯ ವ್ಯರ್ಥ ಮಾಡದೇ ಚೆನ್ನಾಗಿ ಓದಿ. ಪೋಷಕರೆ ಮಕ್ಕಳಿಗೆ ಕೆಲಸದ ಹೊರೆ ಹಾಕದೆ ಅಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಬಳಿಕ ಮಾತನಾಡಿದ ಮುಖ್ಯ ಶಿಕ್ಷಕ ಡಿ.ಸಿ.ಬೊಮ್ಮನಗೌಡ್ರ, ಮಕ್ಕಳ ಭವಿಷ್ಯದಲ್ಲಿ ಎಸ್ಸೆಸ್ಸೆಲ್ಸಿ ಎಂಬುದು ಪ್ರಮುಖ ಮೈಲುಗಲ್ಲು. ಹಾಗಾಗಿ ನಿತ್ಯ ಶಾಲೆಗೆ ಕಳಿಸುವ ಜತೆಗೆ ತಮ್ಮ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ನಮ್ಮೊಂದಿಗೆ ಕೈಜೋಡಿಸಬೇಕು. ಅಂದಾಗ ಕಲಿಕೆ ಪರಿಪೂರ್ಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ ಎಫ್.ಎಸ್.ಕುರಟ್ಟಿ, ಶಿಕ್ಷಕರಾದ ಎಸ್.ವಿ‌.ಹರ್ಲಾಪೂರ, ಆರ್.ಎಂ.ಬಾವಿ, ಎಸ್.ಎಂ‌.ಇಟಗಿ ಹಾಗೂ ಪಾಲಕರು ಇದ್ದರು.

Edited By : Nagaraj Tulugeri
Kshetra Samachara

Kshetra Samachara

11/02/2021 11:44 am

Cinque Terre

13.55 K

Cinque Terre

0

ಸಂಬಂಧಿತ ಸುದ್ದಿ