ನವಲಗುಂದ : ತರಗತಿಯಲ್ಲಿ ಕೂತು ಪಾಠ ಕಲಿಯಬೇಕಿದ್ದ ವಿದ್ಯಾರ್ಥಿಗಳು ಕೈಯಲ್ಲಿ ಬೋರ್ಡ್ ಗಳನ್ನು ಹಿಡಿದು, ಕತ್ತರಿಸಿದ ತರಕಾರಿಗಳನ್ನು ತಮ್ಮೆದುರು ಇಟ್ಟು ಪ್ರತಿಭಟನೆಗೆ ಕುಳಿತಿದ್ದರು. ಅದು ಯಾವ ಶಾಲೆ..? ಮಕ್ಕಳು ಪ್ರತಿಭಟನೆಗೆ ಕುಳಿತ ಕಾರಣವೇನು ಎಂಬುದನ್ನು ನಾವು ನಿಮಗೆ ಹೇಳ್ತಿವಿ ಕೇಳಿ...
ಹೌದು ಇದು ನವಲಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಮುಖ್ಯೋಪಾಧ್ಯಯೆಯ ದಬ್ಬಾಳಿಕೆ, ಕಿರುಕುಳಕ್ಕೆ ಮತ್ತು ವಸತಿ ಶಾಲೆಯ ಮೂಲಭೂತ ಕೊರತೆಯಿಂದ ಬೇಸತ್ತು ಪ್ರತಿಭಟನೆಗೆ ಇಳಿದಿದ್ದರು. ಅಷ್ಟೇ ಅಲ್ಲದೇ ಇಲ್ಲಿ ಕೊಳೆತ ತರಕಾರಿಗಳೇ ವಿದ್ಯಾರ್ಥಿಗಳ ಊಟಕ್ಕೆ ಇರೋದು, ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಮಾಡುವ ಅವಕಾಶ ಕೂಡ ಇಲ್ಲದ ಪರಿಸ್ಥಿತಿ ಈ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯುತ್ತಿದ್ದು, ನೀರು, ಸ್ವಚ್ಛತೆಯ ಕೊರತೆ ಇದಕ್ಕೆಲ್ಲಾ ಇಲ್ಲಿನ ಪ್ರಾಂಶುಪಾಲರಾದ ಅಭಿದಾ ಬೇಗಂ ಕೋಳೂರ ಅವರೇ ಕಾರಣ ಎಂದು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಅಷ್ಟೇ ಅಲ್ಲದೇ ಯಾಕೆ ಈ ರೀತಿ ಆಗ್ತಾ ಇದೆ ಅಂತಾ ಕೇಳಿದ್ರೆ ಪ್ರಾಂಶುಪಾಲಮ್ಮನ ದಬ್ಬಾಳಿಕೆ ಪ್ರತಿಭಟನೆ ಸ್ಥಳದಲ್ಲೂ ಮುಂದುವರೆದಿತ್ತು, ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮುಖ್ಯೋಪಾಧ್ಯ ಅಭಿದಾ ಬೇಗಂ ಕೋಳೂರ ವಿರುದ್ಧ ಪ್ರತಿಭಟನೆಗಿಳಿದಿದ್ದು, ಅವರನ್ನು ಈ ಕೂಡಲೇ ಅಮಾನತ್ತು ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ವಿದ್ಯಾರ್ಥಿ ತನ್ನ ಅಳಲನ್ನು ತೋಡಿಕೊಂದದ್ದು ಹೀಗೆ..
ಇನ್ನು ಇಲ್ಲಿನ ಕೆಲಸಗಾರರಿಗೂ ಮುಖ್ಯೋಪಾಧ್ಯ ಅಭಿದಾ ಬೇಗಂ ಕೋಳೂರ ಕಿರುಕುಳ ಹೆಚ್ಚಾಗಿದೆಯಂತೆ, ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂಧಿಸುವಂತದ್ದು ನಡೀತಿದೆಯಂತೆ ಈ ಬಗ್ಗೆ ಇಲ್ಲಿ ಕೆಲಸ ಮಾಡುವವರು ಹೇಳೋದು ಹೀಗೆ..
ಇನ್ನು ಈ ಬಗ್ಗೆ ಹಲವು ಸಂಘಟನೆಗಳು ಸಹ ಕೈ ಜೋಡಿಸಿದ್ದು, ಮುಖ್ಯೋಪಾಧ್ಯ ಅಭಿದಾ ಬೇಗಂ ಕೋಳೂರ ಅಮಾನತ್ತು ಆಗೋ ವರೆಗೂ ನಾವು ಪ್ರತಿಭಟನೆ ಕೈ ಬಿಡೋದಿಲ್ಲಾ ಎಂದು ಆಗ್ರಹಿಸಿದರು.
Kshetra Samachara
27/01/2021 03:17 pm